...

4 views

"ಸಮಯದ ಸ್ನೇಹ ಸಂಗಮ....
"ಗೆಳೆಯ ನೀನ ನನಗಾಗಿ
ಸಮಯ ಕೊಡುವಾಗ

ನನ್ನೀ ನೋವನು
ಹಂಚಿಕೊಳ್ಳುವಾಗ

ನಿನ್ನಯ ನೋವನು
ಕೇಳದಾದೆನೇ

ಏತಕೀ ಬಿಗುಮಾನ
ನಾ ನಿನಗೆ ದೂರಾದೆ ನಾ

ಸುಖ ದುಃಖದಿ ಸಮಪಾಲರು
ನಾವೀರ್ವರೂ

ಭಾವನೆಯಲಿ ಬಂಧಿತರು
ಈ ಸ್ನೇಹಿತರು

ತಿಳಿಯದೆ ನಿನಗೆ
ನಾನಿರುವ ಬಗೆ

ನಿನ್ನಯ ಮಾತುಗಳ
ಕೇಳಲು ಕಾತರ

ಅದುವೇ ಸುಖ ದುಃಖ ದ
ಆಗರ

ಎಲ್ಲವೂ ಇಚ್ಛೆಯೆ ಎನಗೆ
ನೀ ತಿಳಿದಿಕೋ ಹೀಗೇ

ಮೌನದಿ ಮರೆಮಾಚದಿರು
ನೋವಲಿ ಬಣ್ಣಿಸಿದಿರು

ಬವಣೆಯಲಿ ಈ ಸ್ನೇಹಿತೆಯ
ಎಂದಿಗೂ ಮರೆಯದಿರು..,✍
👫shobha 🏃‍♀️