...

5 views

ಬದಲಾಗಬೇಕು..ನೋಡುವ ದೃಷ್ಟಿ.
#ಪರಸ್ಪರ_ಗೌರವಿಸುವ_ಭಾವದಲ್ಲಿ
#ಇದೆ_ಬಂಧಗಳ_ಚೈನು.

#ಪುರುಷ ಮತ್ತು #ಮಹಿಳೆ ಸೃಷ್ಟಿಯ ಕಣ್ಣುಗಳು... ಒಂದನ್ನೊಂದು ಬಿಟ್ಟು ಬಾಳಲು ಸಾಧ್ಯವೇ ಇಲ್ಲ... ಎಲ್ಲರಿಗೂ ತಿಳಿದ ವಿಚಾರ. ಆದರೂ ಪುರುಷ ಮತ್ತೆ ಮಹಿಳೆ ಅಂತ ಬಂದಾಗ, ಅಪಮಾನ, ಹೀಗಳಿಯುವಿಕೆ,ಒಬ್ಬರಿಗೊಬ್ಬರು ಜರಿಯುವಿಕೆ ಯಾಕೆ ಎಂಬ ಅರ್ಥ ಇನ್ನೂ ತಿಳಿಯಲಾಗಲಿಲ್ಲ ..

ಪುರುಷ, ಮತ್ತೆ ಮಹಿಳೆ ಅಂದಕೂಡಲೇ ಸಮಾಜದ ಜನರನ್ನು ಮಾತ್ರ ಮನಸ್ಸು ಅಳೆಯುತ್ತದೆ... ಅದಕ್ಕೆ ಈ ಜರಿಯುವಿಕೆ, ಹೀಗಳಿಯುವಿಕೆ ಎಲ್ಲಾ.. ಅದೇ ಪುರುಷ ಅಂದ ಕೂಡಲೇ ,ಮನೆಯ ಸದಸ್ಯರನ್ನು,ಅಂದರೆ, ಅಪ್ಪ, ಅಣ್ಣ, ತಮ್ಮ ಇವರನ್ನು ನೆನೆಸಿಕೊಂಡರೆ ಇಂತಹ ಕೀಳು ಮಟ್ಟದ ಯೋಚನೆ ಹತ್ತಿರ ಕೂಡಾ ಸುಳಿಯದು.ಹಾಗೇ ಮಹಿಳೆ ಎಂದಾಕ್ಷಣ ಮನೆಯ ಅಮ್ಮ, ಅಕ್ಕ, ತಂಗಿ,ಮಗಳು, ಹೆಂಡತಿ ನೆನಪಿಗೆ ಬಂದರೆ ಯಾರೂ ಕೂಡ ಅಸಹ್ಯ ರೀತಿಯಲ್ಲಿ ವರ್ತಿಸಲಾರರು.ಇದು ನನ್ನ ದೃಷ್ಟಿಯಲ್ಲಿ.

ಹುಟ್ಟಿದ ಆ ಕ್ಷಣದಿಂದ ಸಾಯುವ ತನಕವೂ ಕುಟುಂಬದ ನೆರಳಲ್ಲಿ, ಗಂಡು,ಹೆಣ್ಣು ಸಮಾನರಾಗಿ ,ಒಬ್ಬರಿಗೊಬ್ಬರು ಆಸರೆಯಾಗಿ ಬದುಕಲೇಬೇಕು.ಇದು ಬ್ರಹ್ಮ ಸೃಷ್ಟಿಸಿದ ನಿರ್ಣಯ.ಹೆಣ್ಣಿಗೆ, ಹುಟ್ಟಿದಾಗಿಂದ ಮದುವೆ ಆಗುವ ತನಕ,ತವರ ನೆಲೆಯ ಆಶ್ರಯ, ಮದುವೆಯ ಬಳಿಕ ಗಂಡನ ಮನೆಯ ಆಶ್ರಯ... ಇವರೂ ಕೂಡ ಪುರುಷರೇ ಅಲ್ವೇ?ಹೆಣ್ಣು ಹುಟ್ಟಿದಾಗಿಂದ,ಅವಳಿಗೆ ಒಂದು ನೆಲೆ ಸಿಗುವ ತನಕ,ಅಪ್ಪ, ಅಣ್ಣ, ತಮ್ಮರ ಆಸರೆ,ಬೆವರ ಹನಿ,ಪರಿಶ್ರಮ ತುಂಬಾ ಇರುತ್ತದೆ. ಇವರ ನೆರಳಿಲ್ಲದೇ,ಸಹಾಯ ಇಲ್ಲದೇ ಹೆಣ್ಣು ನೆಮ್ಮದಿಯ ಬಾಳು ಬಾಳುವುದು ತುಸು ಕಷ್ಟವೇ...

ಹಾಗೇ,ಗಂಡು ಕೂಡ, ತಾಯ ಗರ್ಭದಿಂದ ಜನಿಸಿ, ತಾಯ ಹಾಲ ಕುಡಿದು,ಅವಳ ಕೈತುತ್ತು ತಿಂದು ಅಮ್ಮನ ಸೆರಗಡಿಯಲ್ಲಿ ಬೆಳೆದು, ಅವಳ ಕಷ್ಟ ನೋವಿನ ಬೆವರ ಹನಿಯಲ್ಲಿ ಮಿಂದು,ಅಕ್ಕ, ತಂಗಿಯರ ತ್ಯಾಗದಡಿಯ ಮಮತೆಯಲ್ಲಿ ತೋಯ್ದು,ತನ್ನ ಜವಾಬ್ದಾರಿ ಅರಿತು ಬದುಕು ನಡೆಸುವಲ್ಲಿ ಸಫಲತೆ ಹೊಂದುತ್ತಾನೆ.ಇಲ್ಲಿ ಹೆಣ್ಣಿಗೆ ಹೇಗೆ ಗಂಡಿನ ಅವಶ್ಯಕತೆ ಇದೆಯೋ,ಹಾಗೇ ಗಂಡಿಗೂ ಕೂಡ ಹೆಣ್ಣಿನ ಅವಶ್ಯಕತೆ ಕೂಡ ಅಷ್ಟೇ ಇದೆ.ಇದನ್ನು ಕೃತಜ್ಞತೆಯ ದೃಷ್ಟಿಯಿಂದ ಅರಿತು ನಮ್ಮ ಮನೆಯ ಗಂಡು ಮತ್ತು ಹೆಣ್ಣು ಜೀವಗಳನ್ನು ಗೌರವಿಸಿ,ಆದರಿಸಿದರೆ ಬಹುಶಃ ಇಂತಹ ಕೀಳುಮಟ್ಟದ ಭಾವನೆಗಳು ಇಬ್ಬರಲ್ಲೂ ಸುಳಿಯಲಾರದೇನೋ.

ಮನೆಯಲ್ಲಿ ಮೊದಲು ಒಬ್ಬರಿಗೊಬ್ಬರು ಗೌರವ ಭಾವ ತಳೆದರೆ ಸಮಾಜದೊಳಗಿನ ಬಂಧವನ್ನು ಸುಲಭದಲ್ಲಿ ಗೌರವಿಸಬಹುದು..ಇದು ಹುಟ್ಟು ಸಂಸ್ಕಾರದ ರೀತಿ...ಸಮಾಜದಲ್ಲಿ ಕಾಣ ಸಿಗುವ ವ್ಯಕ್ತಿತ್ವವನ್ನು ಅದು ಗಂಡಾಗಲೀ,ಹೆಣ್ಣಾಗಲೀ,ನಾವು ಅಗೌರವದಿಂದ ಕಾಣತೊಡಗಿದರೆ ,ಮನೆಯೊಳಗಿನ ಬಂಧವನ್ನೂ ಅಪಮಾನಿಸಿದಂತೆಯೇ.‌‌‌..ಸಮಾಜದ ಒಳಗಿರುವ ವ್ಯಕ್ತಿತ್ವವನ್ನು ನೋಡುವ ದೃಷ್ಟಿ ಬದಲಾಗಬೇಕಿದೆ.ಹಾಗೇ ಗಂಡು ಹೆಣ್ಣು ಎಂಬ ಬೇಧಭಾವದಲ್ಲಿ ಮೇಲಾಗಿ ಕಾಣುತ್ತಿರುವ ಕೀಳು ದೃಷ್ಟಿ ಕಾಮ....ಈ ಭಾವ ಬದಲಾಗಬೇಕಿದೆ....ಕೆಲ ವಿವಾಹಿತ ಪುರುಷ ಮತ್ತು ಮಹಿಳೆಯರಲ್ಲೂ ಕೌಟುಂಬಿಕ ಚೌಕಟ್ಟು ಬಿಟ್ಟು, ಹೊರ ಜಗತ್ತಿನ ಕಡೆ ನೋಡಿದಾಗ,ಸಹೋದರತ್ವದ ಛಾಯೆಗೆ ಮಂಕು ಕವಿದದ್ದನ್ನು ಬಲು ಸ್ಪಷ್ಟವಾಗಿ ನೋಡಬಹುದು... ಇದೇ ನಮ್ಮ ಸಂಸ್ಕೃತಿಯನ್ನು ಅಳಿವಿನ ಅಂಚಿಗೆ ತಳ್ಳಲ್ಪಡುತ್ತಿರುವುದು...
✍️ಶೋಭಾ ನಾರಾಯಣ.