...

23 views

"ಒಲವ ಹೂವೇ ಕೇಳು ಚಲುವೆ "

ನಿನ್ನಯನಗಳ ಅಧಿಸೂಚನೆಗೆ
ನನ್ನಧರಗಳೇ ಮೌನವಹಿಸಿದವು
ಮಂಜಿನಂತೆ ಕರಗಿ ನೀರಾದವು
ಹೇಳಲಾರದ ತಾಪತ್ರಯಗಳು
ಒಂದೊಂದಾಗಿ ಬಳಿಬಂದು ನಿಂತವು.

ಹಾಳಾದ ಈ ವಿರಹವೇ ಹೀಗೆ
ಹರೆಯದಲಿ ತೀರದಾ ಬೇಗೆ
ಸುಳಿ ಸುಳಿದು ಬಂದು ನಿಂತವು
ಸುಮ್ಮನೆ ಪದಗಳಾ ಒಳಗೆ
ಚಳಿಯಲ್ಲಿಯೂ ಬಳಿ ಇದ್ದರೂ
ನಡುಗುತ್ತಲಿವೆ ಒಳಗೊಳಗೆ.

ಎದೆಯ ಕವಾಟಿನೊಳಗಿಂದ
ಬದಿಗೆ ಸರಿದು ಇಣುಕುತ್ತಿವೆ
ನೋಡು ನೋಡುತ್ತ ನಿನ್ನಂದ
ಬೇಡವೆಂದರೂ ಬಂದ ಯೌವನದ ದಿನಗಳಿಂದ
ಮುಪ್ಪುಬಂದರೂ ಸಹ ಕಾಡುತ್ತಲಿವೆ ಗೆಳತಿ ಬಿಟ್ಟು ಬಿಡದಂತೆ ಅಂದಿನಿಂದ
ದಯವಿಟ್ಟು ನಗದಿರು ಹಿಂದಿನಿಂದ..! 💕