...

6 views

ಶಾಲೆಗೆ ಬಾ ಕಂದ

(ಶಿಶುಗೀತೆ)

ಬಾರೋ ಮುದ್ದು ಕಂದ
ನೀ ಹೇಳೋದೆಲ್ಲ ಚಂದ
ಕಾರಣ ನಿನ್ನ ಅಂದ
ನಮಗೆ ನೀನೇ ಮುಕುಂದ

ಅಪ್ಪ ಅಮ್ಮ ಇಲ್ಲ
ನಾವೇ ಇಲ್ಲಿ ಎಲ್ಲ
ಚಿವುಟುವುದಿಲ್ಲ ಗಲ್ಲ
ಕಲಿತರೆ ಕೊಡುವೆ ಬೆಲ್ಲ

ಹಾಡನ್ನು ಕಲಿಸುವೆ
ತಕ ಥೈ ಕುಣಿಸುವೆ
ಅಮ್ಮನ ಹಾಗೆ ಮುದ್ದಿಸುವೆ
ಅಪ್ಪನ ಹಾಗೆ ಪ್ರೀತಿಸುವೆ

ಶಾಲೆಗೆ ಬಾ ಮಗು
ರಾಜನಂತೆ ನಗು
ಪ್ರಾಣಿಯಂತೆ ಕೂಗು
ಗುರುಗಳಿಗೆ ತಲೆ ಬಾಗು

ಬಿಸಿ ಊಟ ಮಾಡು
ಗೆಳೆಯರ ಜೊತೆ ಆಡು
ಹೊಸ ಹೊಸ ಹಾಡು
ಕಂಠ ಪಾಠ ಮಾಡು

ಒಂದು ಎರಡು ಹೇಳು
ಅಂಗಿಗೆ ಎರಡು ತೋಳು
ಆರರ ನಂತರ ಏಳು
ಚಾಕೊಲೇಟು ಕೇಳು

ಚಂದು ವಾಗೀಶ ದಾವಣಗೆರೆ