...

8 views

ಅನುಭವಗಳ ಮಹಲಿನಲ್ಲಿ ಒಂದು ಸುತ್ತು....
ಒಳ್ಳೆ,ಅನುಕೂಲಸ್ಥ ಹೆಣ್ಮಗಳು ಬಂದ್ಲು ಶಾಪಿಗೆ...ಬಂದವಳು 300,400ರೂನಷ್ಟು ವ್ಯಾಪಾರ ಮಾಡಿದಳು.ಎಲ್ಲಾ ತಗೋಂಡ ಬಳಿಕ,ಚೌಕಾಸಿ ಶುರು ಮಾಡಿದ್ಲು😁ಡಿಸ್ಕೌಂಟ್ ಇಲ್ವಾ?ಅಂತ ಕೇಳಿದ್ದಲ್ದೇ,ನಮ್ದೂ ಬಟ್ಟೆ ಅಂಗಡಿ ಇದೆ.ನಮಗೂ ಗೊತ್ತು ವ್ಯಾಪಾರ ಅಂದ್ಲು..ನಾನು ಸೌಮ್ಯದಿಂದಲೇ ಉತ್ತರಿಸಿದೆ.ನೋಡಿ,ನಿಮ್ಮ ವ್ಯಾಪಾರಕ್ಕೂ,ನಮ್ಮ ವ್ಯಾಪಾರಕ್ಕೂ ತುಂಬಾ ವ್ಯತ್ಯಾಸ ಇದೆ .ನಿಮ್ಮ ತರ,ಇರೋ ಬೆಲೆಗಿಂತ ಜಾಸ್ತಿ ಸ್ಟಿಕ್ಕರ್ ಅಂಟಿಸಿ, ಬಾರ್ಗೇನ್ ಮಾಡುವ ವ್ಯಾಪಾರ ಇದಲ್ಲ.ಹತ್ತು ಇಪ್ಪತ್ತು ರೂಪಾಯಿಯಿಂದ ಶುರು ಆಗೋ ಚಿಕ್ಕ ವ್ಯಾಪಾರ.. ಇದರಲ್ಲೂ ಡಿಸ್ಕೌಂಟ್ ಕೇಳಿದ್ರೆ ಹೇಗಮ್ಮಾ ಅಂದೆ.ಗೊಣಗುತ್ತಲೇ ಹಣ ನೀಡಿ,ಯಾರನ್ನೋ ಕಾಯುತ್ತಾ ಅಲ್ಲೇ ನಿಂತುಕೊಂಡಳು.
ಕಾಲಲ್ಲಿ ಚಪ್ಪಲಿಯೂ ಇಲ್ಲದ ಒಬ್ಬ ಕೂಲಿ ಹೆಣ್ಮಗಳು ಎಣ್ಣೆ, ನೀರು ಕಾಣದ ತನ್ನ ಇಬ್ಬರು ಮಕ್ಕಳು, ಮತ್ತೆ ಗಂಡನೊಂದಿಗೆ ಬಂದ್ಲು.ಬ್ರೆಡ್, ರಸ್ಕ್,ಹೀಗೇ ಅವಳೂ ನೂರಾರು ರೂಪಾಯಿ ವ್ಯಾಪಾರ ಮಾಡಿದಳು.ಆ ಪುಟಾಣಿ ಮಕ್ಕಳು, ಆಸೆಗಣ್ಣಿಂದ ತಿಂಡಿ, ತಿನಿಸುಗಳನ್ನು ನೋಡೋದು ನೋಡಿ ಮನಸ್ಸಿಗೆ ನೋವು ಕಾಡಿತು. ಇರೋ ಬರೋ ದುಡ್ಡು ಜೋಡಿಸಿ ಕೊಡುವಾಗ..ಏನೋ ಸಂಕಟ ಆಗಿದ್ದು ಸತ್ಯ.. ತುಸು ಕಡಿಮೆ ಮಾಡಿ ಹಣ ತೆಗೆದುಕೊಂಡು ಕಳುಹಿಸಿದೆ..ಆ ಮಕ್ಕಳಿಗೆ ಚಾಕಲೇಟ್ ನೀಡಿ ಕಳುಹಿಸಿದೆ..ಇದನ್ನೆಲ್ಲಾ ನೋಡ್ತಿದ್ದ ಆ ಅನುಕೂಲಸ್ಥ ಮಗಳು,ನನ್ನ ನೋಡಿ,ನಗುತ್ತಾ, ಅಲ್ಲಾರಿ,ನಾನು ಡಿಸ್ಕೌಂಟ್ ಕೇಳಿದಾಗ ಇಲ್ಲ ಅಂದಿರಿ?ಅವರಿಗೆ ಡಿಸ್ಕೌಂಟ್ ಗಿಂತಲೂ ಕಡಿಮೆ ಹಣ ತೆಗೆದುಕೊಂಡಿರಿ..ನ್ಯಾಯವಾ?ಎಂದಳು..ಶಕ್ತಿ ಇರುವವರಿಗೆ ಒಂದು ರೂಪಾಯಿ ನೂ ಬಿಡೋಲ್ಲ.ಕೊಡುವ ಶಕ್ತಿ ಇಲ್ದೇ ಹೋದವರಿಗೆ ನಮ್ಮ ಶಕ್ತಿ ಇರುವಷ್ಟು ಅವರಿಗೆ ರಿಯಾಯಿತಿ ನೀಡೋದು ನಮ್ಮ ಧರ್ಮ ಎಂದೆ.ಏನನಿಸ್ತೋ, ಸ್ವಾರೀ.ಅಷ್ಟು ಯೋಚನೆ ಮಾಡೇ ಇರಲಿಲ್ಲ ಎಂದರು...
ಅವರು ಹೇಳಿದುದರಲ್ಲಿ ತಪ್ಪೇನೂ ಕಾಣಲಿಲ್ಲ ನನಗೆ. ಯಾಕೆಂದರೆ, ಮನುಷ್ಯ ಬೇರೆಯವರ ಬಗ್ಗೆ ಯೋಚನೆ ಮಾಡೋದಕ್ಕಿಂತ ಹೆಚ್ಚು ತನ್ನ ಬಗ್ಗೆಯೇ ಚಿಂತೆ ಮಾಡೋದು...ಅಶಕ್ತರ ಕಡೆ ತುಸು ಗಮನ ಹೊಂದಿದರೂ ಸಾಕು..ತಕ್ಕಮಟ್ಟಿಗೆ ಹೆಗಲಾಗಬಹುದು..ಆದರೆ ಅಂತಹ ಹೃದಯ ವೈಶಾಲ್ಯತೆಯನ್ನು ಹೊಂದಬೇಕಷ್ಟೇ....
✍️ಪೂರ್ವವಾಹಿನಿ.