...

20 views

ಕಳೆದೋದೆನು ನಾನು ಕಳೆದೋದೆನು
ಕಳೆದೋದೆನು ನಾನು ಕಳೆದೋದೆನು

ನಿನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿ
ಕಳೆದೋದೆನು ನಾನು ಕಳೆದೋದೆನು
ತೀರದಾಸೆಯ ಬಿಸಿ ಉಲ್ಕೆಯಂತೆ ಉಕ್ಕಿ
ಹಿಡಿಯಲಾರದೆ ಚೆಲ್ಲಿದ ಹಾಲಾದೆನು

ನಿನ್ನ ಬಯಕೆಯ ಉಸಿರು ಮನವ ಹೊಕ್ಕು
ಕಳೆದೋದೆನು ನಾನು ಕಳೆದೋದೆನು
ದಾರಿ ಸಿಗದೆ ಕುಳಿತೆ ಜನರ ಮುಂದೆ ಕಂಗೆಟ್ಟು
ನನ್ನ ಹೆತ್ತವರ ಬಿಟ್ಟು ಮನೆಯ ಹೊರಗಾದೇನು

ನಿನಗಾಗಿ ಗಡಿಯಾಚೆ ಕಾಲಿಟ್ಟು
ಕಳೆದೋದೆನು ನಾನು ಕಳೆದೋದೆನು
ಕಡೆಗೊಮ್ಮೆ ನೀ ಸಿಕ್ಕು ನಿನ್ನ ಪ್ರೇಮದಲ್ಲಿ
ಮುಗಿಲ ಬಾನಾಗಿ ಬೆಳಕಾದೆನು


ರಾಧ ಹಾಸನ
© All Rights Reserved