...

5 views

ಕಪ್ಪಾಗಿಹಳೊ ಎನ್ನ ಕಾಳಿ.
ಸ್ಮಶಾನ ರಾತ್ರಿ ಕಳೆದಳೋ
ರುಂಡ ಪಿಡಿದು ಹೊರಟಳೊ
ಕೈಯ ತುಂಡರಸಿ ವಸ್ತ್ರವನ್ನಾಗಿಹಿಸಿದಳೋ
ಇವಳಾವ ಭಯದ ಮೂರ್ತಿಯೊ
ಭಯದ ಕಂಗೆಟ್ಟ ಅವತಾರವೋ.
ಯಾರು ನಿನ್ನವರು ತನ್ನವರು ಇಲ್ಲದವಳು
ಸ್ಮಶಾನ ಭೂದಿಯಲಿ ಅವತರಿಸಿದಳೋ.
ಅಯ್ಯ ಕೇಳಯ್ಯ ಅವಳಿಗೆ ನೀನೇ ಅಹಾರವೋ.
ಜೀವದ ಅಧಿಕಾರದ ಉನ್ಮಾದದಲ್ಲಿದ್ದವನ.ಸದೆಬಡೆದು
ಕಾಲತಟಿಯಲ್ಲಿ ಸದಶಿವನನ್ನಾಗಿಸಿದಳೊ.
ಕಪ್ಪಾಗಿಹಳೊ ಎನ್ನ ಕಾಳಿ.