...

15 views

ಕನಕನ ಕನಸು
ಕನಕನ ಕಥೆಯನು ಕೇಳಿಸು ಕೃಷ್ಣನೆ,
ಕೋರಿಕೆ ಕರುಣಿಸು ಕರುಣಾಮಯನೆ.

ಕನಕನ ಕೂಗಿಗೆ ಕಲ್ಲೆದೆ ಕರಗಿತೆ?
ಕೈದಿ ಕಾಯದ ಕಷ್ಟವು ಕಂಡಿತೆ?
ಖರ್ವಿತ ಕುರುಬನ ಕೂಗದು ಕೇಳಿತೆ?
ಕನಕನ ಕಾಣುವ ಕಾತುರ ಕಾಡಿತೆ?

ಕಿಂಡಿಯ ಕೊರೆದೆಯ ಕೃಷ್ಣನೆ ಕಣ್ಣಲೆ?
ಖಂಡಿಸಿ, ಕಟ್ಟಿದ ಕಲ್ಲಿನ ಕೋಟೆಯ!
ಕಡುಗವಿಲ್ಲದೆ, ಕುಡುಗೋಲಿಲ್ಲದೆ!
ಕಲ್ಪನೆಯಲ್ಲ, ಕಲ್ಪಿತವಲ್ಲ.

ಖಿನ್ನ ಕನಕನಿಗಿತ್ತೆಯ ಕಾಣಿಕೆ?
ಕಿಂಡಿಯ ಕೃಪೆಯ ಕೊಟ್ಟೆಯ ಕೊನೆಗೂ!
ಕಂಡೆಯ ಕನಕನ ಕಣ್ಣಲಿ ಕಾಂತಿಯ,
ಕೃಷ್ಣನ ಕಾಣುವ ಕನಸಿನ ಖಾತ್ರಿಯ?!

- ಕೃಷ್ಣಕವಿ
© All Rights Reserved
#ಕೃಷ್ಣಕವಿ #ಏಕಾಕ್ಷರ_ಕವನ