...

28 views

ಜಶದ ವಾಂಛೆಯಲ್ಲಿ.....

* ಬೆಹರ್ ಆಧಾರಿತ ಗಜಲ್ *
( ೧೧೧/೧೧೧/೨೧೧೧ )
•••••••••••••••••••••••••••••
ಮನವು ಜಶವ ಕಾಮಿಸಿದೆ
ಶ್ರಮವು ಅಳಲ ದೂಷಿಸಿದೆ

ಹೃದಯ ಕನಸ ವಾಂಛಿಸಿದೆ
ಪಥವು ಗುರಿಯ ಲಕ್ಷಿಸಿದೆ

ಬವಣೆ ಪತನ ಕಾಣುತಿದೆ
ಜವವು ಸುಖವ ಸಂಧಿಸಿದೆ

ಗೆಲುವ ಮೊಹರು ಯಾಣದಲಿ
ಬಿಸಿಲು ಹಿತವ ಮೋಹಿಸಿದೆ

ನಯನ ನಗುತ ನರ್ತಿಸಿದೆ
ನನಸು ಒಲವ ಮೂಡಿಸಿದೆ.
✍️ನಯನ ಭಟ್ 💞

ಈ ವೇದಿಕೆಯಲ್ಲಿ ನನ್ನ ಮೊದಲ ಬರಹವಿದಾಗಿದ್ದು, ಸಹೃದಯಿ ಓದುಗರ ಪ್ರೋತ್ಸಾಹವನ್ನು ಪ್ರೀತಿಯಿಂದ ಬಯಸುತ್ತೇನೆ.

ಆ ಭಗವಂತ ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 😊

#ನಯನ_ಜಿ_ಎಸ್ #ನಯನ_ಗಜಲ್ #ನಯನ_ಕನ್ನಡಬರಹ #ನಯನ_ಬದುಕುಬರಹ
© All Rights Reserved