...

2 views

ಕೊರೊನ ಫಜೀತಿ
ಕೊರೊನ ಫಜೀತಿ
ರಚನೆ; ಭೃಂಗಿಮಠ ಮಲ್ಲಿಕಾರ್ಜುನ

ಕಣ್ಣೀರು ಸುರಿಸುತ
ಹೃದಯ ಕಲಕುವ ದೃಶ್ಯ ನೋಡುವುದೆಂತು
ಮಾನವೀಯತೆ ಪರೀಕ್ಷಿಸುವ ಕಾಲವಿದು
ಕೋರೋನ ವೈರಾಣು ಮಾಡಿದ ಹೈರಾಣಕೆ ತತ್ತರಿಸಿದೆ ಫಜೀತಿಯಾಗಿ ಜನಮನ

ಅಮ್ಮ,ಅಪ್ಪ,ಕಾಕಾ,ಅಣ್ಣ ತಮ್ಮ
ಯಾರಿದ್ದರೂ
ಬಿಕ್ಕಿ ಬಿಕ್ಕಿ ಅಳುವುದೊಂದು ಬಿಟ್ಟು ಬೇರೇನೂ ಮಾಡದ ಅಸಹಾಯಕತನ

ಸೇವೆಯ ಸಧಿಚ್ಚೆಯಿದ್ದರೂ
ಅನುಮತಿಯಿಲ್ಲದೇ ಕರಳು ಬಳ್ಳಿಯ ಕುಡಿಯ ನರಳಾಟಕೆ ಮನೆಯಲ್ಲೇ ಕುಳಿತ ವೃದ್ಧರಿಗೆ ಮೌನ ಗಂಟಲತನ

ಕಣ್ಣೀರ ಧಾರೆಯಲಿ
ಜೀವಂತ ಶವವಾಗಿ ಕಾಣುತಿದ್ದರೂ ಉಳಿಸುವ ಪ್ರಯತ್ನಕೆ ವೈದ್ಯರೇ ದೇವರು ಶುಶೃತರೇ ಪೂಜಾರಿಗಳಾಗಿ ಸೇವೆಗೈಯುತ್ತಿರುವ
ಮಾನವೀಯತನ

ಕರಳು ಬಳ್ಳಿಯ ನರಳಾಟ ಎ
ನೋಡಿ ಮಾತಾಡುವಂಗಿಲ್ಲ
ಹಣ್ಣು ಹಂಪಲ ಇವ್ಯವೂ ಒಯ್ದು ಕೊಟ್ಟು ಸಾಂತ್ವನ ಹೇಳುವಂಗಿಲ್ಲ
ಬೆಡ್ಡಲ್ಲಿ ಮಲಗಿದ ಕೋ..ರೋಗಿ ಹೊರಳಾಟತನ

ಅಡಲೊಡೆದು ಮನದ ದಿಕ್ಕು ತಪ್ಪಿದಂತಾಗಿ
ಶಕ್ತಿ ಕಳೆದು ಕೊಳ್ಳುತ್ತಿರವಾಗ ಚೇತೆರಿಕೆಗೆ ಸಮಾಲೋಚನೆ ಮಾಡುವವರು ಯಾರೆಂಬ ಪ್ರಶ್ನೆ ಕಾಡುತ್ತಿದೆ ಎಲ್ಲಿ ಆ ದಯಾತನ

ನಿರೀಕ್ಷೆಯಲ್ಲೇ ಬದುಕುವ ಆಸೆಯಿಟ್ಟು ಧೈರ್ಯತನದಿಂದಿದ್ದರೂ
ಚುಚ್ಚು ಮದ್ದುಗಳು ಬ್ಲಾಕಲ್ಲಿ ಮಾರುವಾಗ
ಅನಿವಾರ್ಯತೆಯ ಸೃಷ್ಠಿಸಿದೆ ಖರೀದಿಗೆ ವ್ಯಾಪಾರಿತನ

ಸಿಡಿಲು ಬಡಿದಂತೆ
ರೋಗಿಯ ಮನೆಯವರಿಗಾದರೆ
ಬಡಿದು ತಿನ್ನುವ ಖದೀಮರಿಗೆ ತಗುಲಿದೆ
ಹಣದ ಪಿಶಾಚಿತನ

ಬಡಿದೆಬ್ಬಿಸು ಜಾಗೃತಿಯ ಘಂಟೆ
ಕೊರೋನಾ ಬಾರದ ಹಾಗೆ ಬದುಕಲಿ ಜನಮನ
ಪಾಲಿಸೋಣ ನಿಯಮ ನೀತಿ ರೂಢಿ ಎಚ್ಚರಿಕೆತನ ಮಾಡಿದ ಭೃಂಗಿಮಠ ಕವಿನಮನ
© Mallikarjun Bhrungimath