...

7 views

ಬುದ್ಧಿವಂತ ಕಲಾವಿದರು


ಜೀವನವೆಂಬ ನಾಟಕದಲ್ಲಿ ನಾವೆಲ್ಲರೂ ಬುದ್ದಿವಂತ ಕಲಾವಿದರು/
ಸಂತೋಷವಿಲ್ಲದಿದ್ದರೂ ತುಂಬಾ ಸಂತೋಷವಿರುವೆಂದು ನಾಟಕ ಮಾಡುವೆವು/
ಮನದೊಳಗೆ ದುಃಖವಿದ್ದರೂ ದುಃಖಗಳಿಗೆ ಜಾಗವಿಲ್ಲವೆಂದು ಬಿಂಬಿಸುವೆವು/
ಮನತುಂಬಾ ನೋವುಗಳಿದ್ದರೂ ಯಾರಿಗೂ ಕಾಣಿಸದಂತೆ ನಗುತ್ತಿರುವೆವು/
ಏಕೆ ಹೀಗೆಂದು ಅರಿಯಲಾರದೆ ದೇವರಿಗೂ ಸೋಜಿಗವಾಗುವಂತಿರುವೆವು/
ಕೆಲಕ್ಷಣ ಬದಲಾವಣೆ ಆಗಲು ಮನಮಿಡಿದರುಬದಲಾಗಲು ಸಾಧ್ಯವಿಲ್ಲವೆಂಬಂತಿರುವೆವು/
ಅರ್ಥವಾಗದ ಜೀವನದಿ ಜೀವಿಸುವ ನಾವೆಲ್ಲರೊಂತರ ಜಾಣವಂತರು /
ಕನಸುಗಳ ಮೂಟೆಗಳನ್ನು ಹೊತ್ತು ದಿನಂಪ್ರತಿದಿನ ಕಾಯುವೆವು/
ನನಸಾಗಬಹುದೇನೊ ಎಂಬ ನಿರೀಕ್ಷೆಯೊಳಗಿರುವೆವು/
ನನಸಾಗದ ಕನಸಾಗದರೂ ಕೂಡ ನನಸಾಗಲೆಂದು ಮನದಿ ಆಶೆಪಡುವೆವು/
ಬುದ್ದಿವಂತರಲ್ಲಿ ಅತೀ ಬುದ್ದಿವಂತರೇ ನಾವುಗಳು/
ವಿದ್ಯೆ ಇದ್ದರು ಸರಿಯಾದ ಕೆಲಸ ಸಿಗದೆ ಒದ್ಧಾಡುತಿದ್ದರು/
ಅದನ್ನು ಮನಬಿಚ್ಚಿ ಯಾರೊಡನೆಯು ಹೇಳಲಾರೆವು/
ನಂಬಿಕೆಯ ಸುಳಿಯೊಳಗೆ ಕೆಲವೊಮ್ಮೆ ತಮ್ಮ ನೋವ ಹೇಳಿ/
ದುಃಖ ಅನುಭವಿಸಿದರು ಏನು ಆಗಲಿಲ್ಲವೆಂಬಂತೆ ಮನದಿ ದುಃಖಿಸುವೆವು/
ನೀರ ಮೇಲಿನ ಗುಳ್ಳೆ ಎಂದು ಜೀವನವು ಎಂಬ/
ಸತ್ಯ ತಿಳಿದಿರುವ ಜಾಣ ಕುರುಡು ಮನದವರು/


ರಾಧಿಕಾ ಗಿರೀಶ್ ಮಯ್ಯ
ಬಿ ಸಿ ರೋಡ್