
9 views
ಉಲ್ಲಾಸ ಉತ್ಸಾಹ
ಈ ದಿನವೇನೋ ಸಂತೋಷವಾಗಿ
ಹೊಸ ಉತ್ಸಾಹ ಮೂಡಿದೆ
ಮನದಲಿ ಖುಷಿಯೂ ತುಂಬಿದೆ
ಸರಿಗಮ ಹಾಡುವಂತೆ ಮಾಡಿದೆ
ತಕದಿಮಿ ಕುಣಿಯುವಂತೆ ಆಗಿದೆ........
ನೆನ್ನೆಯ ವ್ಯಥೆ ಇನ್ನಿಲ್ಲ
ನಾಳೆಯ ಚಿಂತೆ ಇಂದಿಲ್ಲ
ಹಕ್ಕಿಯ ಹಾಡಿನ ಇಂಪು
ಉಲ್ಲಾಸ ತಂದಿದೆ
ಹೊಸ ಉತ್ಸಾಹ ಮೂಡಿದೆ................
ತಂಗಾಳಿಯ ಈ ಸ್ಪರ್ಶಕೆ
ಸಂತೋಷವೂ ಹೆಚ್ಚಾಯಿತು
ಕಾರಣ ಇಲ್ಲದೆ
ಆನಂದವು ನನಗಾಯಿತು..................
ಹಾರುವ ಹಕ್ಕಿಯಂತೆ
ಜಿಗಿಯುವ ಜಿಂಕೆಯಂತೆ
ಈಜುವ ಮೀನಿನಂತೆ
ಮಿನುಗುವ ತಾರೆಯಂತೆ....................
ಏನಾಗಿದೆ ನನಗೀದಿನ
ಏನಾಗಿದೆ ನನಗೀಕ್ಷಣ
ಹೊಸ ಉಲ್ಲಾಸ ತಂದಿದೆ
ಮುಖದಲಿ ನಗುವು ತುಂಬಿದೆ............
ತಾಳಲಾರದ ಹರುಷವು
ನನ್ನೇ ಅರಸುತಾ ಬಂದಿದೆ
ಹೇಳಲಾರದ ವಿಷಯವು
ಹೇಗೆ ಹೇಳಲಿ ಅರಿಯೇನು................
ಈಗ ಚಂದ್ರನು ಮರೆಯಾದನು
ಆ ಸೂರ್ಯನು ಬಂದಾಯಿತು
ಮುಂಜಾನೆಯ ಈ ಹೊತ್ತಲ್ಲಿ
ಸಂತಸ ಹೆಚ್ಚಾಯಿತು
ನಗುವನ್ನು ನೆನೆದು
ಇರುವ ನೋವನ್ನು ಮರೆತು
ಎಂದೂ ಕಾಣದ ನಲಿವು
ಇಂದು ಕಂಡೆನು ನಾನು
ಹೊಚ್ಚ ಹೊಸತನ
ಇದುವೇ ಶುಭ ದಿನ...........................
ಈ ದಿನವೇಕೊ ಸಂತೋಷವಾಗಿ
ಉಲ್ಲಾಸ ತಂದಿದೆ
ಹೊಸ ಉತ್ಸಾಹ ಮೂಡಿದೆ................
© chethan_kumar
ಹೊಸ ಉತ್ಸಾಹ ಮೂಡಿದೆ
ಮನದಲಿ ಖುಷಿಯೂ ತುಂಬಿದೆ
ಸರಿಗಮ ಹಾಡುವಂತೆ ಮಾಡಿದೆ
ತಕದಿಮಿ ಕುಣಿಯುವಂತೆ ಆಗಿದೆ........
ನೆನ್ನೆಯ ವ್ಯಥೆ ಇನ್ನಿಲ್ಲ
ನಾಳೆಯ ಚಿಂತೆ ಇಂದಿಲ್ಲ
ಹಕ್ಕಿಯ ಹಾಡಿನ ಇಂಪು
ಉಲ್ಲಾಸ ತಂದಿದೆ
ಹೊಸ ಉತ್ಸಾಹ ಮೂಡಿದೆ................
ತಂಗಾಳಿಯ ಈ ಸ್ಪರ್ಶಕೆ
ಸಂತೋಷವೂ ಹೆಚ್ಚಾಯಿತು
ಕಾರಣ ಇಲ್ಲದೆ
ಆನಂದವು ನನಗಾಯಿತು..................
ಹಾರುವ ಹಕ್ಕಿಯಂತೆ
ಜಿಗಿಯುವ ಜಿಂಕೆಯಂತೆ
ಈಜುವ ಮೀನಿನಂತೆ
ಮಿನುಗುವ ತಾರೆಯಂತೆ....................
ಏನಾಗಿದೆ ನನಗೀದಿನ
ಏನಾಗಿದೆ ನನಗೀಕ್ಷಣ
ಹೊಸ ಉಲ್ಲಾಸ ತಂದಿದೆ
ಮುಖದಲಿ ನಗುವು ತುಂಬಿದೆ............
ತಾಳಲಾರದ ಹರುಷವು
ನನ್ನೇ ಅರಸುತಾ ಬಂದಿದೆ
ಹೇಳಲಾರದ ವಿಷಯವು
ಹೇಗೆ ಹೇಳಲಿ ಅರಿಯೇನು................
ಈಗ ಚಂದ್ರನು ಮರೆಯಾದನು
ಆ ಸೂರ್ಯನು ಬಂದಾಯಿತು
ಮುಂಜಾನೆಯ ಈ ಹೊತ್ತಲ್ಲಿ
ಸಂತಸ ಹೆಚ್ಚಾಯಿತು
ನಗುವನ್ನು ನೆನೆದು
ಇರುವ ನೋವನ್ನು ಮರೆತು
ಎಂದೂ ಕಾಣದ ನಲಿವು
ಇಂದು ಕಂಡೆನು ನಾನು
ಹೊಚ್ಚ ಹೊಸತನ
ಇದುವೇ ಶುಭ ದಿನ...........................
ಈ ದಿನವೇಕೊ ಸಂತೋಷವಾಗಿ
ಉಲ್ಲಾಸ ತಂದಿದೆ
ಹೊಸ ಉತ್ಸಾಹ ಮೂಡಿದೆ................
© chethan_kumar
Related Stories
15 Likes
2
Comments
15 Likes
2
Comments