...

9 views

ಓ ಮನಸೇ..‌‌
ಬದಲಾಗಬೇಕು ನೀ ಮೊದಲು

ಮನಸೇ

ತಾನಾಗೇ ಬದಲಾಗುವುದು ನಂತರದಿ

ವ್ಯವಸ್ಥೆ

ಎಲ್ಲಾ ಸಮಯವೂ ಒಂದೇ ರೀತಿ ಇರದು

ಪರಿವರ್ತನೆ ಜಗದ ನಿಯಮವು ನೋಡು

ಇಂದಿನ ದಿನದಂತೆ ನಾಳೆ ಇರದು ಎಂದೂ

ಪ್ರತೀ ಘಳಿಗೆಯೂ ತರುವುದು ಹೊತ್ತು ಹೊಸತು ಹೊಸತು

ಮರೆಯಾದ ಕ್ಷಣವ ನೆನೆದು ಕೊರಗದಿರು

ದಿಗ್ಭ್ರಮೆಗೆ ಒಳಗಾಗಿ

ಅರಿಯುವುದು ಇನ್ನೂ ಇದೆ ಮುಂದೆ

ಅರಗಿಸಿಕೊಳ್ಳುವ ಶಕ್ತಿ ಕರುಣಿಸಲಿ ಭಗವಂತ

ನಿನಗೆ...‌

✍️ ಪೂರ್ವವಾಹಿನಿ