...

10 views

ನಿರಾಭಿಮಾನದ ಹೆಣ್ಣೆ
ನಾ ನಿನ್ನ ಅಭಿಮಾನಿ:

ನಿರಾಭಿಮಾನದ ಹೆಣ್ಣೆ
ನಾ ನಿನ್ನ ಅಭಿಮಾನಿ,
ನೀ ನನ್ನ ದೊರೆಸಾನಿ.

ಜಾತಿ-ಧರ್ಮದ ಪರಿಧಿಯ ಹರಿದಾಕಿ,
ಅಕ್ಷರಗಳ ಪರದೆ ಸುಟ್ಟು ನಿಂತಕಿ.
ನೀ ಬದುಕಿನ ಕನ್ನಡಿ,
ನಿನಗೇಕೆ ಬೇಕು ಮುನ್ನುಡಿ ಬೆನ್ನುಡಿ.
ಪೆನ್ನು ಹಿಡಿದು ಕುಂತು ಕರೆದು ಕಾಯ್ದರೂ ಬರದಾಕೆ, ಏನೋ ಕೆಲಸದಲ್ಲಿರುವಾಗ ಕರೆದು ಬರೆಯೆಂದಾಕೆ.
ನಿನಗೆ ವ್ಯಾಕರಣಗಳು ಆಭರಣ,
ಗುರು-ಲಘು ಎಂಬುವ ಗೆಜ್ಜೆ ತೊಟ್ಟು ಕುಣಿವಾಗ,
ಉಪಮಾ ರೂಪಕ ಎಂಬಿತ್ಯಾದಿ ಅಲಂಕಾರ,
ಇದೆಲ್ಲವೂ ಇರದಿದ್ದರೂ ಅತಿ ಸುಂದರ.
ಎಲ್ಲದರೊಳಗು ನೀ ಬಚ್ಚಿಟ್ಟುಕೊಂಡು ಕುಂತಾಕಿ,
ಸದಾ ನೀ ನನ್ನಿಂದೆ ನಿಂತು ನಗುವಾಕಿ.
ನೀ ನನ್ನ ಜೊತೆಗಿರಲು,
ನನಗೇಕೆ ಬೇಕು ಮತ್ತಿನ ಅಮಲು.
ನಿರಾಭಿಮಾನದ ಹೆಣ್ಣೆ,
ನಾನಿನಗೆ ಅಭಿಮಾನಿ
ನೀ ನನಗೆ ದೊರೆಸಾನಿ.
- ಭಾರತೀಶ.
© ಭಾರತೀಶ