...

3 views

ಕನ್ನಡಿಯ ಬಿಂಬ
ರೇಣು ಒಮ್ಮೆ ಕನ್ನಡಿಯಲ್ಲಿ ಮುಖ‌ನೋಡಿದಳು.
ಮೈ ಪೂರ ಬೆವರಿತ್ತು. ಮುಖ ಕೆನ್ನೆ ಕೆಂಪಾಗಿತ್ತು. ಹರಟು ಕೂದಲು. ತುಟಿಯಂಚಿನಲ್ಲಿ ಸಣ್ಣಗೆ ರಕ್ತ ಒಸರುತ್ತಿತ್ತು. ಉಸಿರಾಟ ಜೋರಾಗಿತ್ತು. ತನ್ನ ಮುಖವನ್ನೇ ತಾನು ಕನ್ನಡಿಯಲ್ಲಿ ನೋಡಿ ನಾಚಿಕೊಂಡಳು. ತಾನು ಮಾಡಿದ್ದು ಸರಿಯಿದೆ ಎಂಬ ಭಾವ ಮೂಡಿತ್ತು.

ಮತ್ತೆ ಮುಖ ತೊಳೆದು ತಲೆಕೂದಲನ್ನು ಒಗ್ಗೂಡಿಸಿ ಶೇಂಡಿ ಕಟ್ಟಿಕೊಂಡಳು. ಕಳಚಿಟ್ಟ ಮೆಟಲ್ ಬಳೆಗಳನ್ನು ಕೈಗಳಿಗೆ, ಜೋತಾಡುವ ಜುಮುಕಿಯನ್ನು ಕಿವಿಗಳಿಗೆ, ಕನ್ನಡಿಗೇ ಅಂಟಿಸಿ ಹೋಗಿದ್ದ ಬಿಂದಿಯನ್ನು ಪುನಃ ಹಚ್ಚಿಕೊಂಡಳು. ಬ್ಯಾಗ್ ತೋಳಿಗೆ ಸಿಕ್ಕಿಸಿಕೊಂಡು ಹೊರ‌ನಡೆದಳು.

ಹೌದು. ರೇಣು ಡೇಟಿಂಗ್ ಗೆ ಬಂದಿದ್ದಳು. ಅವಳಿಗೆ ಮಾಲ್ ನಲ್ಲಿ ಅನಾಚನಕ್ ಆಗಿ ಸಿಕ್ಕವ ನೈಲ್ . ಅವನಿಗೆ ಅವಳ ಕಂಡೊಡನೆಯೇ ಆಕರ್ಷಿತನಾದ. ಅಡ್ಡಲಾಗಿ ನಿಲ್ಲಿಸಿ ಮಾತಿಗಿಳಿದ. ಇವಳಿಗಂತೂ ಪರಿಚಯವೇ ಇಲ್ಲ. ಮಾತನಾಡಲು ಹಿಂದುಮುಂದು ನೋಡಿದಳು. ಕಸಿವಿಸಿಯಾದರೂ ಅವನು ನೋಡಲು ಚೆನ್ನಾಗಿಯೇ ಇದ್ದ. ಅವನ ಸಿಕ್ಸ್ ಪ್ಯಾಕ್ ದೇಹ. ಶರ್ಟ್ ನ ಎರಡು ಬಟನ್ ತೆಗೆದು ನಟ ರವಿಚಂದ್ರನ್ ತರಹ ಹೀರೋ ಲುಕ್ ನಲ್ಲಿ್ದ. ಅವಳು ಸರಿಯಾಗಿ ನೋಡಿದಾಗಲೇ ಕಣ್ಣು ಕಣ್ಣು ಬೆಸೆದು ಏನೋ ಒಂದು ಮಿಂಚು ಸಂಚಾರವಾಯಿತು. ಇಬ್ಬರು ನಿಧಾನಗತಿಯಲ್ಲಿ ಹೆಜ್ಜೆ ಹಾಕಿದರು. ಪರಸ್ಪರ ಪರಿಚಯ ಮಾಡಿಕೊಂಡರು.

ಅವನು ನೇರವಾಗಿ ಕೇಳಿಯೆ ಬಿಟ್ಟ.‌ you are so beautiful. I wanna hug you.
ಅವಳಿಗೆ ಅಚ್ಚರಿಯಾಯಿತು.
you are a crazy boy. ಎಂದಳು.
ಹುಡುಗಿಯ ಒಮ್ಮೆ ನೋಡಿದ ಕೂಡಲೇ ಅಂತದ್ದೇನು ಅನಿಸುವುದು? ಎಂಬುದು ಅವಳ ಪ್ರಶ್ನೆ.
ಅವನು ನಗುತ್ತಲೇ ಉತ್ತರಿಸಿದ. ನೀನು ಬೈಯುವುದಿಲ್ಲ ಎಂದರೆ ಹೇಳುವೆ. ಕೇಳು.
ಸರಿ ಹೇಳು.
ನಿನ್ನಲ್ಲೇನೋ ಸೆಳೆತವಿದೆ. ಬಾಚಿ ತಬ್ಬಿ ತುಟಿಗೆ ತುಟಿ‌ ಬೆರೆಸಿ‌ ಮುತ್ತನಿಡಲೇ?! ಅನಿಸುವುದು. ನಿನ್ನ ಒಪ್ಪಿಗೆ ಇದ್ದರೆ ಮುಂದುವರಿಸಬಹುದು ಎಂದ.

ಅವನ ಮಾತಿಗೆ ದಂಗಾಗಿ ಹೋದಳು. ಇಲ್ಲ. ಎಂದಳು. ಅವನು ಮತ್ತೆ ಮತ್ತೆ ಬೇಡಿಕೆಯನ್ನಿಟ್ಟ.
ಅವಳು ಅಲ್ಲಿಂದ ಹೊರಟು ಹೋದಳು.
ಅವನು ಓಡಿಹೋಗಿ ತನ್ನ ಮೊಬೈಲ್ ಸಂಖ್ಯೆ ನೀಡಿದ. please text me. you are very attractive.
I wanna share something..
ಅವಳಿಗೆ ಏನನಿಸಬೇಕು.
ಒಬ್ಬ ಹುಡುಗ , ಹುಡುಗಿಯ‌ ನೋಡಿದ ‌ತಕ್ಷಣ ಯಾವ ಭಾವನೆ ಮೂಡಲು ಸಾಧ್ಯ?! ತನ್ನನ್ನೇ ಪ್ರಶ್ನಿಸಿಕೊಂಡಳು.
.
ಅವನು ಸ್ನೇಹ ಬೆಳೆಸಲು ಕೇಳುತ್ತಿಲ್ಲ, ಪ್ರೀತಿಯ ಮಾತಂತೂ ದೂರದಲ್ಲಿದೆ. does he wants me??
Is he calling for Date?!
oh NO.!! ಎಂದು ಚಿಂತೆಗೀಡಾದಳು.

ಕೂಡಲೇ ಆಟೋ ಹತ್ತಿ ಮನೆ ಕಡೆಗೆ ನಡೆದಳು.

ಮನೆಯಲ್ಲಿ ಯಾರೂ ಇಲ್ಲ. ಸ್ವಂತ ದುಡಿಮೆಯಿಂದ ಫ್ಯಾಟ್ ಖರೀದಿಸಲು ಪಟ್ಟ‌ಕಷ್ಟ ಅಷ್ಟಿಷ್ಟಲ್ಲ. ವಯಸ್ಸು ಮೀರಿಯಾಗಿತ್ತು. ಬಂದ ಹುಡುಗರಂತೂ ವಯಸ್ಸಾಗಿದೆ ಎಂದೇ ದೂರಿ ಹೋಗುತ್ತಿದ್ದರು. ಕೆಲವರಂತೂ ಕಾರಣವೂ ಹೇಳದೆ ರಿಜೆಕ್ಟ್ ಮಾಡುತ್ತಿದ್ದರು. ಅಪ್ಪ ಅಮ್ಮ ಅದೆಷ್ಟು ಮುನಿಸಿಕೊಂಡಿದ್ದರೆಂದರೆ ಅವಳು ಸ್ವಾವಲಂಬಿ, ಸ್ವತಂತ್ರವಾಗಿ ಜೀವನ ನಡೆಸುವ ಒಬ್ಬ ಸ್ತ್ರೀ ಎಂಬ ಹೆಮ್ಮೆ ಪಡುವ ವಿಷಯಕ್ಕೂ ಬೆಂಬಲಿಸದೇ ಮದುವೆ ಮಾಡಿಕೊಳ್ಳುತ್ತಿಲ್ಲ. ಬಂದ ವರನನನ್ನು ಬೇಡ ಎನ್ನುತ್ತಿದ್ದಾಳೆ ಎಂದು ದೂರುತ್ತಿದ್ದರು.

ರೇಣುವಿಗೆ ವಯಸ್ಸು ೩೩ ಅವಳ ಮುಖವೇನು ಸುಕ್ಕುಗಟ್ಟಿಲ್ಲ. ಆದರೆ ಆ ಎಳೆ ಹುಡುಗಿ‌ ತಾರುಣ್ಯದ ಬೆಡಗಿಯರಂತೆ ಬಳುಕುತ್ತ ನಡೆಯಲು ಬರುವುದಿಲ್ಲ ನಾಚಿ ನೀರಾಗುವುದೂ ಇಲ್ಲ. ಉದ್ಯೋಗದಲ್ಲಿ‌ಉತ್ತುಂಗದ ಸ್ಥಾನದಲ್ಲಿರು ಆಕೆಗೆ
ಒಂಟಿತನ ಕಾಡುತ್ತಿದುದು ಸುಳ್ಳಲ್ಲ.
ಭಾಗ ೨ ಮುಂದಿದೆ

#MirrorReflections
© Writer Sindhu Bhargava