...

14 views

✨️ತಿರುವು✨️
ನಡೆದಾಡುವ ದಾರಿಯಲಿ
ಸಹಜ ತಿರುವು
ಬಾಳದಾರಿಯಲ್ಲೂ ಇದೆ
ಅರಿಯದ ತಿರುವು

ದಾಟಲೇಬೇಕು ತಿರುವು
ಪೂರ್ತಿಯಾಗಲು ಪ್ರಯಾಣ
ಅರಿಯಲೇಬೇಕು ತಿರುವು
ಇದು ಜೀವನದ ಯಾನ

ತಿರುವಿನ ನಂತರ ನೇರದಾರಿ
ಅರಿವಿನಲ್ಲಿ ಬದುಕಿನ ಸವಾರಿ
ತಿರುವಿರದ ದಾರಿಯಿಲ್ಲ
ಅರಿವಿರದೆ ಬದುಕಿಲ್ಲ

ತಿರುವಿನಲ್ಲಿ ಗಮನವಿರಬೇಕು
ತಪ್ಪಿಸಲು ಅಪಘಾತ
ಬದುಕಿನಲ್ಲಿ ಅರಿವಿರಬೇಕು
ನೆಮ್ಮದಿಯಿರಲು ಅನವರತ
© ಭಾರ್ಗವಿ ವರ್ಧನ್*(ಭಾವ)*✍🏻
#ಭಾವಸಾಲುಗಳು #WritcoQuote