...

5 views

ಅನುಭವದ ಮಹಲಿನಲ್ಲಿ ಒಂದು ಸುತ್ತು...

ಸಂಬಂಧಗಳು ಯಾಕೆ ಹಳಸಿ ಹೋಗುತ್ತೆ ಬೇಗ?ಅದೂ ಇತ್ತೀಚೆಗೆ ಅಂತೂ ಸರ್ವೇಸಾಮಾನ್ಯ.. ಅಂತ ಒಂದು ಚಿಕ್ಕ ಚರ್ಚೆ ಆಗಿತ್ತು ..ನನ್ನ ಮತ್ತೆ ನಮ್ಮ ಗ್ರಾಹಕ ದೇವರ ನಡುವೆ😊
ನನಗೆ ತಿಳಿದ ಅಲ್ಪ ಜ್ಞಾನದ ಮೇರೆಗೆ...😊
ತುಂಬಾ ಮುಖ್ಯವಾಗಿ,ಒಂದು ನಮಗೆ ನಿಭಾಯಿಸುವ ಶಕ್ತಿ ಇಲ್ಲ.
ಹೇಗೆಂದರೆ... ನಮಗೆ ಬೇಗ ಬೇಗ ಜನಪ್ರಿಯರಾಗಬೇಕು ಎಂಬ ಹಂಬಲವೋ,ಶೀಘ್ರವಾಗಿ ಬೆಳೆಯಬೇಕೆಂಬ ಬಯಕೆಯೋ,ಅಥವಾ ಹೊಸ ಹೊಸ ಬಂಧಗಳ ಆಹ್ವಾನಿಸಿ ತುಂಬಿಕೊಳ್ಳುವ ತವಕವೋ..ಇಂತಹ ಸಂಕುಚಿತ ಭಾವಗಳಿಗೆ ಒಳಗಾಗಿ, ನಿಜವಾಗಿಯೂ ನಮ್ಮ ಆರಾಧಿಸುವ, ಅಥವಾ ಪ್ರೀತಿಸುವ ಜೀವಗಳನ್ನು ಅಸಡ್ಡೆ ಮಾಡುವುದು.ಅವರನ್ನು ಅಗೌರವಿಸುವುದು..ನಾವು ನೆನಪಿಟ್ಟುಕೊಂಡು ನಡೆಯಬೇಕಾದುದು ಏನೆಂದರೆ, ಹಳೆಯ ನೀರು ಹರಿದು,ಸ್ವಚ್ಛ ಮಾಡಿಟ್ಟ ಮೇಲೇ ಹೊಸ ನೀರು ಹರಿದು ಬರೋದು...ಹೊಸ ನೀರು ಹರಿದು ಬಂದ ಮೇಲೆ ಹಳೆಯ ನೀರನ್ನು ಮರೆತು ಹೋದರೆ ಭಗವಂತ ಕೂಡ ಮೆಚ್ಚಲಾರ..ಯಾಕೆಂದರೆ ನಮ್ಮೊಳಗೆ ಇರುವ ಕಸ,ಕಡ್ಡಿ ಸ್ವಚ್ಛ ಮಾಡಿ,ನಾವು ಎಲ್ಲರಿಗೂ ಬೇಕಾದಂತ ವ್ಯಕ್ತಿತ್ವ ರೂಪಿಸಿ ,ಮಾರ್ಗದರ್ಶನ ನೀಡೋದು ಹಳೆಯ ನೀರಿನ ರೂಪದ ಹಳೆಯ ಬಂಧಗಳೇ..‌ಪ್ರತೀ ಬಂಧಗಳಿಗೂ ಅದರದೇ ಆದ ವ್ಯಕ್ತಿತ್ವ ಇದೆ.ಅದರದೇ ಆದ...