...

7 views

"ನಿನ್ನಯಾ ನೆನಪು "
ನೀನಿರುವಾಗ ಮನದಲ್ಲಿ
ನನಗ್ಯಾರದೂ ನೆನಪಿಲ್ಲ
ಕಣ್ಣುಗಳಾ ಮುಚ್ಚಲು
ಮತ್ತೆ ಕಣ್ಣುಗಳ ಬಿಚ್ಚಲು
ನಿನ್ನೆನಪು ಬಿಟ್ಟು ಬೇರೆ ಇಲ್ಲ,

ಹಸಿವಂತೂ ಆಗದೆಂದು
ತಿಳಿದಿದ್ದೆ ನಾನಂತೂ
ನಿನ್ನೊಲವ ಹಸಿವೊಂದು ಬಿಟ್ಟು
ಬೇರೆಯಾ ಹಸಿವ ಅನುಭವಿಸಿಲ್ಲ
ಚಳಿಯಲ್ಲೂ ಬಿಸಿ ತಾಕಿಸುವ ಅನುಭವವು ನೀ ಕೊಟ್ಟೆ
ಕೊನೆಗೆ ಅರ್ಧದಲ್ಲೇ ಕೈ ಬಿಟ್ಟೆ

ಹುಣ್ಣಿಮೆಯ ಚಂದಿರನ ಬೆಳಕಿನಲಿ
ಬಿಡಿಸಿ ಬಣ್ಣ ಬಣ್ಣಗಳ ರಂಗೋಲಿ
ಆಡಿಬಿಟ್ಟು ನನ್ ಮನದೊಳಗೆ ಗಿಲ್ಲಿ
ಹೊರಟು ಹೋದೆ ನೀ ನಗುವ ಚಲ್ಲಿ
ಅಂದಿನಿಂದಾಗಿದೆ ನನ್ನ ಬಾಳು ಚೆಲ್ಲಾಪಿಲ್ಲಿ..!
© _✍️ನಿಗೂಢ ಹುಬ್ಬಳ್ಳಿ.