...

6 views

ಸ್ಮೃತಿ ಪಟಲದಲ್ಲಿ ಚಿತ್ರಪಟ
ಬಾಲ್ಯದ ದಿನಗಳು ಬಹಳ ಸುಂದರ ನೋಡು
ಅನುದಿನ ಆಟಪಾಠ ಜೊತೆಗೆ ಸವಿಯೂಟ
ಓಡಾಡಿಕೊಂಡಿರುವುದು ಜಿಂಕೆಯಂತೆ ಗದ್ದೆ ತೋಟ
ಅಮ್ಮನ ಜೊತೆಗೆ ಕಾಡುಮೇಡು ಸುತ್ತಿ
ಸಿಹಿಜೇನ ಸಂಗ್ರಹಿಸೊ ಖುಷಿಯೇ ಬೇರೆ..

ತಪ್ಪು ಮಾಡಿದಾಗೆಲ್ಲ ಅಪ್ಪನ ಕೈಲಿ ಬೈಸಿಕೊಂಡು
ಗಡಗಡನೆ ಹೆದರುತ್ತ ಅವರ ಕಂಡೊಡನೆ ಕೋಣೆ ಸೇರುವ ಭಯವು ನಾ ಕಾಣೆ...

ಬೆನ್ನಿಗಂಟಿದವರೊಡೆ ಸಣ್ಣ ಸಣ್ಣ ವಿಷಯಕ್ಕೆ ಜಗಳವ ಮಾಡುತ್ತ ಕೋಳಿಯಂತೆ ಕುಟುಕುತ್ತ
ಅದು ನನ್ನದು ಇದು ನನ್ನದು ಎಂಬ ಸ್ವಾಮತೆ ಬೇಕೆ??

ದಿನಗಳು ಉರುಳಿ ಹೈಸ್ಕೂಲು ಕಾಲೇಜೆಂದು
ಒಂದೊಂದೆ ಮೆಟ್ಟಿಲ ಏರುವಾಗ..
ಆಸೆರೆಕ್ಕೆ ಬಲಿತು ಕೊಂಚ ಬುದ್ಧಿಯಿ ಬೆಳೆದು
ಓದಿನಲಿ ಗಮನ ಹರಿಸೊ ರೀತಿ ಬೇರೆ..

ಪ್ರೀತಿಪ್ರೇಮಕೆ ಸಿಲುಕಿ ಕಾಲ ಕಳೆಯದಿರು
ಸ್ನೇಹದ ಭಾಷೆಗೆ ಅನುವಾದ ಬೇಕೆ..
ನೆನಪುಗಳ ಪುಟಗಳಲಿ ಸ್ನೇಹಿತರೇ ತುಂಬಿರಲಿ
ಮೊದಲ ಒ್ರೀತಿಗೊಂದು ಸಣ್ಣ ಜಾಗವಿರಲಿ..

ಪದೇ ಪದೇ ಕದ್ದು ನೋಡುವ ಆ ಕಳ್ಳ ಕಣ್ಣುಗಳು
ಅವನಂದಕೆ ಸೋತು ನಿಂತಲ್ಲೇ ನಿಂತಿಬಿಡು
ಎನುವಾಗ
ನಿಸರ್ಗಗೀತೆಯೊಂದು ಕಿವಿಯಲ್ಲಿ ಗುಯ್ಗುಡುತ
ನಾನೇ ನಾಯಕನಟಿಯಂತೆ ಬೀಗುವುದು..

ಕೊಂಚ ಕಿರುನಗು, ಅದೊಂದು ಮಾತಿಗೆ ಹಂಬಲಿಸುವ ಮನಕೆ
ಕಾಲೇಜು ಜೀವನ ಮುಗಿಯುತ ಬಂದರೂ
ಪ್ರೀತಿ ಹೇಳಿಕೊಳಲಾಗದು..

ಸಂಕೋಚ‌ ನಾಚಿಕೆ ಮುಗ್ಧ ಒಲವೇ ಕಾಣಿಕೆ..
ಅವನ ನಿರ್ಮನ ಜೀವನದಲ್ಲಿ
ಹಾಗೆ ಉಳಿದುಬಿಡುವ ನಾಲ್ಕು ಹೆಜ್ಜೆ ಗುರುತು..

ಭಾಗ ೨ ಇನ್ನೂ ಇದೆ.

© Writer Sindhu Bhargava