...

2 views

ವಾಲ್ಮೀಕಿ ಮಹರ್ಷಿಗಳ
: ವಾಲ್ಮೀಕಿ

ಮಹರ್ಷಿ ವಾಲ್ಮೀಕಿ ರಾಮಾಯಣವ ಬರೆದಾತ
ಹಲವಾರು ಶ್ಲೋಕಗಳನ್ನು ಬರೆದ ವಿಧಾತ
ಆದಿಕವಿ ಎಂದು ಗುರುತಿಸಿಕೊಂಡ ಜಗತ್ಜನಿತ
ಸಂಸ್ಕೃತ ಪಾಂಡಿತ್ಯದಲ್ಲಿ ಮೆರೆದವನಾತ

ರಾಮಸೀತೆಯರ ನಡೆನುಡಿ ತಿಳಿಸುತ್ತಾ
ತಾತ್ವಿಕ ಸಂದೇಶದ ರಚನೆಕಾರರು
ಧ್ಯಾನ ಕಠೋರವಾದ ತಪಸನ್ನು ಮಾಡಿ
ಬ್ರಾಹ್ಮಣರಾಗಿ ಬೆಳೆದ ವಿದ್ವಾಂಸರು

ಸೀತೆಗೆ ಆಶ್ರಮದಲ್ಲಿ ಆಶ್ರಯ ನೀಡಿ
ಲವಕುಶರನ್ನು ಸಾಕಿ ಸಲುಹಿದವರು
ಬೆಳೆಸಿದ ಅವಳಿ ಮಕ್ಕಳ ಜೋಡಿಗೆ
ರಾಮಾಯಣದ ಕಥೆಯನ್ನು ವಿವರಿಸುವರು

ಪುನರ್ಜನ್ಮ ಪಡೆದು ಬ್ರಹ್ಮನಾಗಿ ಅವತರಿಸಿ
ಜ್ಞಾನವ ಪಡೆಯಲು ಇವರನ್ನು ಆರಾಧಿಸೆಂದರು
ತುಳಸಿದಾಸರಾಗಿ ರಾಮಚರಿತಮಾನಸ್ ರಚಿಸಿ
ಧಾರ್ಮಿಕ ಪಂಥದಲ್ಲಿ ಅನುಯಾಯಿಗಳೊಂದಿದರು.

ಚಂದು ವಾಗೀಶ ದಾವಣಗೆ