...

4 views

ನೀ ತೊರೆದ ಕ್ಷಣ
ನಾ ಎನೋ ಹೇಳೋಕೆ ಬಂದೇ ನಿಂಗೆ
ಆದರೆ ನೀನು..,
ಆಮೇಲ್ ಹೇಳು ಅಂತಾ ಅಂದೆ
ನಾ ನಿನ್ನೇ ನೋಡುತ್ತಾ ಕೂತೆ
ಆದರೆ ನೀನು..,
ಇರಿಟೇಟ್ ಆಗ್ತಿದೆ ನಿನ್ನಿಂದ ಅಂದೆ
ನಿಂಗೋಸ್ಕರ ಏನೊ ಮಾಡ್ಬೇಕು ಅನ್ಕೊಂಡೆ
ಆದರೆ ನೀನು..,
ನಾನೇ ಬೇಡ ಅಂತಾ ತೋರೆದು ಹೋದೆ
ಪರವಾಗಿಲ್ಲಾ....,
ನಾನಿವಾಗ ಬೆಚ್ಚನೆ ಮಲ್ಗಿದಿನಿ ಮಣ್ಣಲ್ಲಿ ಮಣ್ಣಾಗಿ
ನಿನೇ ಕರೆದ್ರು ನಾ ಬರೋದಕ್ಕೂ ಆಗಲ್ಲ ಈಗ....