...

6 views

ಶೀರ್ಷಿಕೆ:ರೈತನ ಬಾಳ್ ಹೊಲದಾಗ
ಚಿತ್ರಕ್ಕೆ ಹೊಂದುವ ಜನಪದ ಗೀತೆ ರಚನೆ
*******************************************
ಹಳ್ಳಿಯ ಸೊಬಗನ್ನೊಮ್ಮೆ ಎಲ್ಲರೂ ನೋಡ ಬನ್ನಿರಯ್ಯ
ಎತ್ತ ನೋಡಿದರೂ ಹಚ್ಚ ಹಸಿರು ಬಣ್ಣದ ಸಿರಿಯಯ್ಯ
ಗದ್ದೆಗಳ ಸಾಲುಗಳು ನೋಡಲು ಕಣ್ಣಿಗೆ ಅಚ್ಚರಿಯಯ್ಯ
ದುಡಿವ ರೈತನ ಮನದಲ್ಲಿ ಹರ್ಷದ ಐಸಿರ ಕಂಡಿರಯ್ಯ//

ನೇಗಿಲು,ಹಾರೆ ಹಿಡಿದು ಕಾಯಕ ಮಾಡುತ್ತಿರುವ ರೈತನಾತ
ಸಾಗುವಳಿ ಮಾಡಲು ಶ್ರಮದ ಪ್ರಯತ್ನ ಅನವರತ
ಪ್ರಾಣಿ, ಪಕ್ಷಿಗಳಿಗೂ ರೈತನೆಂದರೆ ಸಾಕು ಬಲುಹಿತ
ನೇಗಿಲ ಯೋಗಿಯಾಗಿ ಬೆವರು ಸುರಿಸಿ ದುಡಿಯುವಾತ//

ಹೆಂಗಳೆಯರೆಲ್ಲ ಹೊಲದೊಳು ನಾಟಿ ಸಾಲು ನೆಟ್ಟರು
ಪಾಡ್ದಾನ ಹಾಡುಗಳ ಹಾಡುತ್ತ ಕುಣ್ದರು
ದನಿವಿಲ್ಲದೆ ಬೇಸರಗಳ ಮರೆತು ಹೊಯ್ಯುವರು
ಬರುವ ಬೆಳೆಯಲ್ಲಿ ಆತ್ಮತೃಪ್ತಿ ಪಟ್ರು//

ರೈತನಿಲ್ಲದ ಭೂಮಿ ಮರುಭೂಮಿಯಣ್ಣ
ರೈತನೇ ನಮ್ಮ ಪಾಲಿನ ದೇವರಣ್ಣ
ನಾವು ನಿತ್ಯ ಉಣ್ಣಲು ಅವನೇ ಕಾರಣವಣ್ಣ
ಅವನಿಲ್ಲದ ನಮ್ಮ ಬದುಕು ಬರೀ ಶೂನ್ಯವಣ್ಣ//

ಬಿಸಿಲು,ಮಳೆಯೆನ್ನದೆ ರೈತನ ಬಾಳು ಸಾಗುವುದು ಹೊಲದಾಗ
ಹಸಿವು ತಡೆ ಹಿಡಿದು ಬೆವರು ಇಳಿಸಿ ದುಡಿಯುವಾಗ
ನಮ್ಮಮನ ಅದ ನೋಡಿ ಕರಗುವುದು ಬಲು ಜೋರಾಗ
ರೈತನ ಬಾಳು ಎಂದೆಂದೂ ಇರಲಿ ಪಸಂದಾಗ//

ಸವಿತಾ ಸತೀಶ್ ಶೆಟ್ಟಿ ✍️
© ❣️ಸವಿತಾ (ಸವಿಸತಿ)❣️