...

4 views

ದೇವಕನ್ಯೆ ದೇವದಾಸಿ
ರಂಗಮಂಟಪದೊಳು ರಂಗನಾಯಕಿಯಾಗಿ
ಮನದಮಂಟಪದೊಳು ಮೌನರಾಗವ ಹಾಡುತಿಹ ತರುಣಿ

ನಗುಮೊಗವ ಹೊತ್ತು ನಾಟ್ಯರಾಣಿಯಾಗಿ
ತೆರೆಮರೆಯ ಹಿಂದೆ ಕಣ್ಣೀರಧಾರೆಯ ಸುರಿಸುವ ತರುಣಿ

ಸ್ನಿಗ್ಧ ಚೆಲುವಿನ ಮುದ್ದು ಮೊಗದ ಹೂವಾಗಿ
ದುರುಳ ಜನರ ಕೈಗೊಂಬೆಯಾಗಿ ನಲುಗಿಹ ತರುಣಿ

ದೈವಕನ್ಯೆ ಎಂಬ ನಾಮಧಾರಿಣಿಯಾಗಿ
ರಂಗಭೋಗದ ವಸ್ತುವಾಗಿ ಕೊರಗುತಿಹ ತರುಣಿ

ಸಕಲಾಲಂಕಾರ ಆಭರಣಧಾರಿಯಾಗಿ
ಕಮರಿದ ಕನಸುಗಳ ಬೆನ್ನಟ್ಟುವ ದೇವದಾಸಿ ಈ ತರುಣಿ

ಶ್ರೀಪ್ರಭಾ. ಎನ್
© Shreepabha