...

1 views

ಜೀವನದ ಸಾರ್ಥಕತೆ
ಭಾವ ವರ್ಷ
ಬಿಂದು ೭

ಜೀವನದ ಸಾರ್ಥಕತೆ

ನವಮಾಸ ಅಮ್ಮನ ಬೆಚ್ಚಗಿನ ಒಡಲಲ್ಲಿ
ನಂತರದಲೂ ಅವಳ ಮಮತೆ ಕಡಲಲ್ಲಿ
ಹೆತ್ತವಳ ಮಡಿಲಲ್ಲಿ ಹಾಯಾಗಿ ನಾ ಮಲಗಿ
ಕಳೆದಿದ್ದೆ ಬಾಲ್ಯವನು ಸಂತಸದ ನಡುವಲ್ಲಿ

ಭರವಸೆಯ ಆಸರೆಯ ಆಲದ ನೆರಳಲ್ಲಿ
ಜಗದ ವ್ಯವಹಾರಗಳ ಕಲಿಸಿದ ತಿಳಿವಲ್ಲಿ
ಅಪ್ಪನ ಕೈಹಿಡಿದು ಬೆಳೆದೆ ದೊಡ್ಡವಳಾಗಿ
ನನ್ನ ಕಾಲ ಮೇಲೆ ನಿಲುವಂತಾದ ನಲಿವಲ್ಲಿ

ಬಿದ್ದಾಗ ಮೇಲೆತ್ತಿದ ಸೋದರಿಕೆಯ ಪ್ರೀತಿ
ಗೆದ್ದಾಗ ಬೆನ್ನುತಟ್ಟಿದ ಮೈತ್ರಿಯ ರೀತಿ
ನಿಯಮಗಳ ಕಟ್ಟುಪಾಡಿನ ರಕ್ಷಣೆಗೆ
ಬಾಳ ಸಾರ್ಥಕತೆ ತಂದು ಕೊಟ್ಟದ್ದೇ ನೀತಿ

ಓಡಿಸುತ ಬರಡು ಬದುಕಿನ ಏಕತಾನ ಶಾರದೆಯ ಸೇವೆ ಮಾಡುವ ವರದಾನ ಅಸ್ಮಿತೆಯ ದೊರಕಿಸಿತ್ತು ಬರವಣಿಗೆ
ಮನದಾಳದ ಅಭಿವ್ಯಕ್ತಿಗಳ ಮೆರವಣಿಗೆ

ಈ ಜೀವನವೊಂದು ದೇವ ಕೊಟ್ಟ ಕಾಣಿಕೆ
ಬಳಸಿಯದನು ಪರರ ಒಳಿತು ಉಪಕಾರಕೆ
ಇರಬೇಕು ದೃಷ್ಟಿ ಮಾನವೀಯತೆಯೆಡೆಗೆ ಲಭಿಸುವುದು ದೈವದೊಲ್ಮೆ ಎಲ್ಲರ ಹಾರೈಕೆ

ಸುಜಾತಾ ರವೀಶ್
೧೭.೧೧.೨೦೨೨