...

13 views

ತೋರಿಕೆ ಸಜ್ಜನ
ಅನ್ಯರ ಮೆಚ್ಚಿಸಿ
ಮನೆಯವರ ತೆಗಳಿದರೆ
ತೃಪ್ತಿ ಕೆಲವರಿಗೆ

ಬಂದ ಕಷ್ಟಕೆ ಅನ್ಯರ ದೂಷಿಸಿ
ತನ್ನದಲ್ಲದ ಮನ್ನಣೆ ಕಸಿದರೆ
ಸಂತೃಪ್ತಿ ಕೆಲವರಿಗೆ

ತಪ್ಪುಗಳ ಸಮರ್ಥಿಸಿ
ತಾನೆ ಸರಿ ಎಂದು ವಾದಿಸಿ
ಬೀಗುವಾಸೆ ಕೆಲವರಿಗೆ

ಅನ್ಯರ ಕಾಡಿಸಿ
ಪಾಪದ ಕೊಡ ತುಂಬಿಸಿ
ವಿಧಿ ಕ್ರೂರವೆಂದು ಹಲುಬುವ ಚಟ ಕೆಲವರಿಗೆ.

© ಸುಕನಸು