...

3 views

ಮೌನದ ಮಾತು
ಮಾತು ಮಾತು, ಮಾತುಗಳೇಕೋ?
ಮೌನದಲಿ ಮಾತಿಲ್ಲವೇನು?

ಮಿಂಚುಗಣ್ಣು ಮಿನುಗಿದಾಗ,
ಮುರಿಮೀಸೆಯ ಮುರಿಚಿದಾಗ,
ಮಮತೆಯ ಮುಖಭಾವದಲ್ಲಿ,
ಮಾತುಗಳಿಗೆ ಮಿತಿಗಳೆಲ್ಲಿ?

ಮಲ್ಲೆ ಮಾಮರ ಮಂದಾರಗಳು,
ಮುತ್ತು ಮರಕತ ಮಾಣಿಕ್ಯಗಳು,
ಮನವ ಮುಟ್ಟಿ, ಮಿತಿಯ ಮೆಟ್ಟಿ,
ಮಧುರ ಮಾತನುಸಿರಿಲ್ಲವೇನು?

ಮನದಲ್ಲಿ ಮಾತು ಮೂಡಲು,
ಮನಕೆ ಮನಕೆ ಮೇಳವಿರಲು,
ಮನವನರಿತ ಮಡದಿಯಿರಲು,
ಮಾತು ಮಾತಿಗೆ ಮಾತೇಕೆ?

© ಕೃಷ್ಣಕವಿ
#ಕೃಷ್ಣಕವಿ #ಮಾತು #ಏಕಾಕ್ಷರ_ಕವನ