...

7 views

ಅಂತರಂಗದ ಗೆಳೆಯ...❤️
💖ಅಂತರಂಗದ ಗೆಳೆಯಾ

ನೀ ಸಪ್ತ ಸಾಗರದಾಚೆ
ಸಾವಿರಾರು ಮೈಲಿ
ದೂರವಿದ್ದರೂ ನೀ ನನ್ನೊಳಗಿರುವೆ.

ನೀ ನನಗಾಗಿ ಮೀಸಲಿಟ್ಟ
ಒಲವಿನ ಗಳಿಗೆಯಲ್ಲಿ
ನಾ ಅರಳಿಬಿಡುವೆ ಹೂವಾಗಿ.

ನೀ ನನ್ನ ಸ್ಪರ್ಶಿಸದಿದ್ದರೂ
ನಿನ್ನ ನವಿರಾದ ಬೆರಳುಗಳ
ಚಿತ್ತಾರವನು ನಾ ಬಲ್ಲೆನು ನಲ್ಲ.

ನಮ್ಮಿಬ್ಬರ ನಡುವಿನ
ಅಂತರದ ಲೆಕ್ಕಾಚಾರ ಗಿಂತ
ನಮ್ಮೊಲವಿನ ಆಪ್ತತೆಯೇ ನನಗಿಷ್ಟ.

ಸಾಗರದ ನೀರಮೇಲಿನ
ರವಿ ಕಿರಣಗಳಂತೇ
ನಿನ್ನ ಪ್ರೇಮದ ಮಾತಿಗೆ ನಾ ಸಂತೃಪ್ತಳು💖
💞ಶ್ರೀ💞