...

13 views

ಕಣ್ಣಾ ಮುಚ್ಚಾಲೆ
ವಿಳಾಸವಿಲ್ಲದ ನನ್ನಿ ಹೃದಯಕ್ಕೆ
ತಲಾಷು (ಹುಡುಕಿ ) ಮಾಡಿ
ಅಡಿ ಇಟ್ಟು ಬಂದವಳೇ
ನನ್ನ ಹುಡುಗಿ ಬಾಲ್ಯದ ಬೆಡಗಿ.

ಅಂದು ಆಡಿದ ಕಣ್ಣಾ ಮುಚ್ಚಾಲೆಯ
ಮುಂದುವರೆಸುತ್ತಾ
ಎದೆಯ ಬಾಗಿಲಲಿ ನಿಂತವಳೇ
ಬಾಳ ಸಂಗಾತಿಯಾಗಲು.

ಪ್ರೀತಿ ಪ್ರೇಮವ ಮದವೇರಿಸಿಕೊಂಡು
ಬಾಳಲಿ ಚೆಲ್ಲಾಟ ,ಕಣ್ಣಾಮುಚ್ಚಾಲೆ
ಆಟ ಅಡದೇ
ಹಗಲಲ್ಲೇ ಅರುಂಧತಿ ನಕ್ಷತ್ರ
ತೋರೆಂದು ನಿಂತಿಹಳು
ನನ್ನ ಮನೆಯ ಅಂಗಳದಲ್ಲಿ....

@ದೇವಿ ✍️