...

7 views

ಅವನೆಂದರೆ...
ಅವನೆಂದರೆ ನನ್ನಲ್ಲಿರುವ ಪ್ರೀತಿ
ಅವನೆಂದರೆ ನನ್ನ ಹೃದಯದ ಮಿಡಿತ
ಅವನೆಂದರೆ ನನ್ನ ಸಂತೋಷ ನನ್ನ ಪ್ರೇಮದ ರೀತಿ
ಅವನೆಂದರೆ ನನ್ನಲ್ಲಿ ಅಡಗಿರುವ ಖುಷಿ
ಅವನೆಂದರೆ ನನ್ನಲ್ಲಿರುವ ಉಸಿರು ನನ್ನ ಪ್ರೇಮದ ಹಸಿರು
ಅವನೆಂದರೆ ನನ್ನ ಮನದ ಸಂತಸ
ಅವನೆಂದರೆ ನನ್ನಲ್ಲಿ ನೆಲೆಯಿರುವ
ಉಲ್ಲಾಸ
ಅವನೆಂದರೆ ನನ್ನ ಒಲುಮೆಯು ಶೃಂಗಾರ
ಅವನೆಂದರೆ ನನ್ನ ಭಾವನೆಗಳ ಸಾಗರ
ಅವನೆಂದರೆ ನನ್ನ ಪ್ರೀತಿಯ ಆಗರ
ಅವನೆಂದರೆ ನನ್ನಲ್ಲಿ ನೆಲೆನಿಂತ ಒಲುಮೆಯ ಚಿಲುಮೆ
ಅವನೆಂದರೆ ನನ್ನ ಒಲವಿನ ಸಂಕೇತ
ಅವನೆಂದರೆ ನನ್ನ ಜೀವನದ ಆಧಾರ
ಒಟ್ಟಾಗಿ ಅವನೆಂದರೆ ನನ್ನ ಜೀವನದ ಸಾರ... Raj...