...

8 views

ಜೀವನವೆಂಬ ಸಂತೆ
ಅಂತೆ ಕಂತೆಗಳಿಗೆ ಕಿವಿಯ ಕೊಡುವುದ್ಯಾತಕೊ
ಪರಿಶುದ್ಧವಾದ ಮನಸ್ಸನ್ನು ಕೆಡಿಸಿಕೊಳ್ಳುವುದ್ಯಾತಕೊ
ಬೇರೆಯವರ ಬಗ್ಗೆ ತಿಳಿದುಕೊಳ್ಳುವ ಹಂಬಲ ಯಾತಕೊ
ನೀನು ನಿನ್ನ ಮನಸ್ಸಿನ ಮಾತ ಕೇಳಿ ಬಾಳಬೇಕೊ//

ಜೀವನವೆಂಬ ಸಂತೆಯಲ್ಲಿ ಕಷ್ಟ-ಕಾರ್ಪಣ್ಯಗಳು ಸಹಜ
ಕಷ್ಟಗಳ ದಾಟಿ ಮುಂದೆ ಸಾಗಲೇಬೇಕು ನಿಜ
ನಮ್ಮತನವನ್ನು ಉಳಿಸಿ ನಡೆದರೆ ಯಾರು ಕೊಡಲ್ಲ ಸಜ
ಬಾಳೆಂಬ ಸಾಗರದಲ್ಲಿ ಈಜಾಡುವುದೇ ಒಂದು ಮಜ//

ಬದುಕೆಂದರೆ ಸಿಹಿಕಹಿ ಅನುಭವಗಳ ಸವಿಯೂಟ
ನಿತ್ಯವೂ ಕಲಿಯಬೇಕು ಹೊಸತನದ ಪಾಠ ನಂಬಿದವರಿಂದಲೇ
ಕಲಿಯುತ್ತಿರುವೆವು ನಿತ್ಯ ನೋವಿನ ಪಾಠ
ಅವುಗಳ ಅನುಭವಿಸುತ್ತಾ ಮುಂದೋಗುವುದು ವಿಧಿಯಾಟ//

ನಮ್ಮೆಲ್ಲರ ಬದುಕಿನಲ್ಲಿ ಸಾವಿರಾರು ಆಸೆ, ಕನಸುಗಳು
ಅವುಗಳ ನನಸಾಗಿಸಲು ಒದ್ದಾಡುತ್ತಾ ಇರಬೇಕು ದಿನಾಲೂ
ಕೈಗೆಟಕುವಷ್ಟರಲ್ಲಿ ಮಾತ್ರ ಜೀವಿಸಬೇಕು ನಾವುಗಳು
ಬೇರೆಯವರ ನೋಡಿ ಬದುಕಿದರೆ ಬರುವುದು ಸೋಲು//

ಕಿವಿ ಮಾತುಗಳ ಕೇಳಿ ಬದಲಾಗುವುದು ಯಾಕೆ
ರಾತ್ರಿ ಮಲಗಿದರೆ ಮುಂಜಾನೆ ಏಳುವ ಗ್ಯಾರಂಟಿ ಇಲ್ಲ ಜೋಕೆ
ಒಳ್ಳೆತನದಿಂದ ಒಂದು ದಿನ ಬಾಳಿದರೆ ಊರೆಲ್ಲಾ ಬೆಳಕೆ
ಈ ಮೂರು ದಿನದ ಬದುಕಲ್ಲಿ ಇನ್ನೇನಿದೆ ಖುಷಿಯಾಗಿರೋಕೆ//

ಕಾಲಚಕ್ರದ ಎದುರು ಎಲ್ಲರೂ ಸಮಾನರು
ಬಡವ ಸಿರಿವಂತನೆಂಬ ನೆಪದ ಪಟ್ಟ ಕಟ್ಟಿರುವರು
ಕೊನೆಗಾಲದಲ್ಲಿ ಎಲ್ಲರೂ ಮಣ್ಣಿಗೆ ಸೇರುವರು
ಇರುವಷ್ಟು ದಿನ ಅಂತೆ ಕಂತೆಗಳ ಮರೆತು ಖುಷಿಯಾಗಿರುವ ನಾವೆಲ್ಲರೂ//