...

8 views

ಊರಿನವರ ಕಣ್ಣಿಗವ ಮಹಾರಾಜನು

ಊರಿನವರ ಕಣ್ಣಿಗವ ಮಹಾರಾಜನು
~~~~~~~~~~~~~~~~~~~~~~~~~~~~
ಊರು ಬಿಟ್ಟು ಪಟ್ಣ ಸೇರಿ ವರ್ಷಗಳು ಸಂದಿತು
ಮೊದಲಿದ್ದ ವೇಷ ಭೂಷಣಗಳೇ ಬದಲಾಯಿತು
ಪಟ್ಟಣದ ಜನರ ಮಾತುಗಳಿಗೆ ಮನ ಮರುಳಾಯಿತು
ಅಂತೂ ಇಂತೂ ಒಂದು ಕೆಲಸ ಅವನಿಗೆ ಖಾತ್ರಿ ಆಯಿತು//

ಊರಲ್ಲಿ ಹೆಂಡ್ತಿ ಮಗುವ ಬಾಡಿಗೆ ಮನೆಯಲ್ಲಿ ಇರಿಸಿ ಹೋದವ
ತನ್ನೆಲ್ಲಾ ಜವಾಬ್ದಾರಿ ಹೆಂಡ್ತಿ ಮೇಲೆ ಹಾಕಿ ಪಟ್ಣ ಸೇರಿದವ ಮೊದಲಿನಿಂದಲೂ ಗತ್ತಿನಿಂದ ಮೆರೆದವ
ಅವಳ ಅಪ್ಪ- ಅಮ್ಮನ ಜವಾಬ್ದಾರಿಯನ್ನು ಅವಳಿಗೆ ಬಿಟ್ಟವ//

ವರ್ಷಕ್ಕೊಮ್ಮೆ ಮನೆಯ ಕಡೆ ಅವನ ಆಗಮನ
ನಾಲ್ಕು ದಿನ ಊರಲ್ಲಿ ನಿಂತು ಹೊರಡುವ ಆ ಕ್ಷಣ
ಅವಳು ನೋವನ್ನು ನುಂಗಿ ನಗುವಳು ಪ್ರತಿ ಕ್ಷಣ
ಅವನು ಕೊಟ್ಟ ಅಲ್ಪ ದುಡ್ಡಿನಲ್ಲೇ ಬದುಕಿದಳು ಶಿಸ್ತಿನಿಂದ ದಿನಾ//

ಊರಿನವರ ಕಣ್ಣಿಗವ ಮಹಾರಾಜನಂತೆ ಕಾಣುವನು
ಊರಲ್ಲಿದ್ದ ಕೆಲಸ ಬಿಟ್ಟು ಪಟ್ಣದ ಕಡೆಗೆ ಜಾರಿದವನು
ನಾಲ್ಕೈದು ವರ್ಷದಲ್ಲೇ ಮರಳಿ ಮನೆ ಸೇರಿದವನು
ತಾನೊಂದು ಗತ್ತಿನಿಂದ ಊರಿನಲ್ಲಿ ದೊಡ್ಡ ಮನೆ ಕಟ್ಟಿದನು//

ಆ ಮನೆಯ ಕೆಲಸವಂತು ಅರ್ಧದಲ್ಲೇ ನಿಂತಿತು
ಯಾಕೆಂದರೆ ಕೈಯಲ್ಲಿದ್ದ ದುಡ್ಡು ಖಾಲಿಯಾಯಿತು
ಪಟ್ಟಣದ ಕೆಲಸವನ್ನು ಬಿಟ್ಟು ಬಂದಾಯಿತು
ಕೊನೆಗೂ ಬಾಡಿಗೆ ಮನೆಯಲ್ಲೇ ಅವರ ಜೀವನ ಸಾಗಿತು//