...

21 views

ಹೃದಯ ಸುಂದರಿ
💓 ಹೃದಯ ಸುಂದರಿ💓

ಸಖಿ ..ಮನದ ಭಾವನೆಯ ಅರಳಿಸುವ ಹೃದಯ ಸುಂದರಿ... ಕಾಯುತಲಿರುವೇ ಪ್ರೀತಿಯ ನಿವೇದನೆ ಮಾಡಲು...||

ನನ್ನ ಹೃದಯಕ್ಕೆ ಕಾವಲಿರುವ ನೀನು..
ಕನಸುಗಳಿಗೆ ಜೀವ ತುಂಬುವವಳು...
ಬದುಕಿನ ರಂಗು ರಂಗಿನ ಭಾವಗಳಿಗೆ ಬಣ್ಣ ತುಂಬುವವಳು..
ಸದಾಕಾಲ ಮನದಲ್ಲಿ ಧುಂಭಿಯಂತೆ ಝೆಂಕರಿಸುವವಳು..
ಓ ಹೃದಯ ಸುಂದರಿ ಕಾಯುತಿರುವೆ..ನಿನಗಾಗಿ.||

ಮುಂಗಾರು ಮಿಂಚಿನಂತೆ ಬಂದು..ಹೃದಯವನ್ನು ಕದ್ದು..ದೂರ ನಿಂತು ನಗುತಲಿರುವೆ.
ಪ್ರೇಮದ ಮಳೆಯನು ಸುರಿಸಿ ಅತ್ತಿತ ನೋಡದೆ ಬಾ ಬೇಗ..ಬಂದು ಸೇರು ನನ್ನ...
ಮುದ್ದು ಮುಖದ ಹೃದಯ ಸುಂದರಿಯೇ....||

ಪ್ರೀತಿಯ ಮಳೆಹನಿಗೆ
ನೆನಪುಗಳ ಕೊಡೆ ಹಿಡಿದು..
ಹೃದಯವು ನಿನದೇ ನೆನಪಿನಲಿ ಮೆರವಣಿಗೆ ಹೊರಟಿದೆ.....
ನಾಚಿಕೆ ಬಿಗುಮಾನ ದೂರ ಸರಿಸಿ ಬಂದು ನನ್ನ ಸೇರು ನನ್ನ ಹೃದಯ ಸುಂದರಿಯೇ...😊😊||

✍ ಸತೀಶ ಕುಲಕರ್ಣಿ


© All Rights Reserved