...

26 views

ಅನವರತ ಕನವರಿಕೆ
ಮುದ್ದು ಮುದ್ದಾಗಿಹ ಮಂದಹಾಸ
ತುಂಟತನದ ಕುಡಿ ನೋಟ ವಿಲಾಸ
ಮುತ್ತಿನಂತಿರುವ ದಂತಗಳ ಪ್ರಕಾಶ
ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 ||

ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ
ಬೆಳದಿಂಗಳ ನೈದಿಲೆ ಮೊಗವೇ ಭವ್ಯವಾದಂದ || 2 ||

ರೇಷ್ಮೆಯಂದದ ಮುಂಗುರುಳ ಸೋಕಲು
ಹಗಲಿರುಳು ಏರಿತು ನಿನ್ನ ನೆನಪಿನಮಲು
ನೋಟದ ಅಂಬುವು ಹೃದಯಕೆ ನಾಟಲು
ಒದ್ದಾಡುತಿದೆ ತಾಳಲಾರದೇ ಕುಮುಲು|| 3||

ಕನವರಿಕೆ ಹೆಚ್ಚುತ್ತಿಹುದು ನಿತ್ಯ ನಿರಂತರ
ಕನಸು ನನಸಾಗಿ ತುಂಬಿತೊಡಲ ಆಗರ
ಅನವರತವು ಅನುರಾಗದ ಸಾಕ್ಷಾತ್ಕಾರ
ಅನನ್ಯವು ಹೃದಯದಲಿ ಸಂತಸ ಸಾಗರ || 4||

© ಗುಡ್ಗೆಪೋರ