...

6 views

ಮುದ್ದು ಮಾಯಾವಿ...
ಮುದ್ದು ಮಾಯಾವಿ
ಸದ್ದು ಮಾಡದೇ ಮನಸ ಕದ್ದ..

ಮಾಯಾವಿ ಮೋಹನನ
ಪ್ರೇಮ ಪಾಶಕ್ಕೆ ಪರವಶಳಾದೆನು ನಾನು.

ಮುದ್ದು ಮಾಯಾವಿಯ
ಮೊದ್ದು ಪ್ರೀತಿಗೆ ನನ್ನೀ ಹೃದಯ
ಶರಣಾಯ್ತು ಅಂದೇ.

ಕಾಡಿಸಿ ಪೀಡಿಸಿ ಸತಾಯಿಸುವ
ಅವನ ಕಲೆಗೆ ಮೈಮರೆಯುವೆನು
ಆಗಾಗ..

ಮುದ್ದು ಮಾಯಾವಿಯ ಕದ್ದು
ನೋಡುವ ಹಂಬಲ
ಹೆಚ್ಚಾಗುತ್ತಿದೆ..ಕೆಲವೊಮ್ಮೆ

ಆ ಕಳ್ಳನ,
ಆ ಮಳ್ಳನ
ಮುತ್ತಂತ ಮಾತಿಗೆ ಮತ್ತೇರಿ
ಮೂಕಳಾಗಿರುವೆ....


ದೇವಿ..✍️