...

5 views

ಹೊಸವರ್ಷದ ಶುಭಾಶಯಗಳು
ಆಗಮಿಸುತಿದೆ ಹೊಸ ಸಡಗರದಿ ಇಂದೀಗ ನವ ವರುಷ
ಸರ್ವರಿಗೂ ತರಲಿ ಹಿಗ್ಗು ಸಂತಸ ನೆಮ್ಮದಿ ಹರುಷ
ಕೊಚ್ಚಿ ಹೋಗಲಿ ಮನಮನಗಳ ದುಃಖ ದುಮ್ಮಾನದ ಕಹಿ
ಹೆಚ್ಚಾಗಲಿ ಮನೆಮನೆಗಳಲಿ ಸಿರಿ ಸಂಭ್ರಮದ ಸಿಹಿ
ನನಸಾಗಲಿ ಎಲ್ಲರೂ ಕಂಡ ಕನಸುಗಳು
ಈಡೇರಲಿ ಮನದೆಲ್ಲ ಆಸೆ ಅಕಾಂಕ್ಷೆಗಳು

ಹೊಸ ವರ್ಷ ೨೦೨೩ ರ ಶುಭಾಶಯಗಳು

ಸುಜಾತಾ ರವೀಶ್.
© ಭಾವಯಾನಿ

Related Stories