...

17 views

ಕಾಣದ ಪ್ರೀತಿ
ಕೈ ಚಾಚಿದೆ ಮನ
ಕಾಣದ ಪ್ರೀತಿಗೆ
ಹಾತೊರೆದಿದೆ ಹೃದಯ
ನಿನ್ನಯ ಒಲವಿಗೆ
ಕಾದಿವೆ ಕಂಗಳು ನಿನ್ನ ಚಿತ್ರವ
ಸೆರೆಹಿಡಿಯಲು

ನಲ್ಲೇ..
ಸಾಕು ಈ ನಿನ್ನ ಚೆಲ್ಲಾಟ
ತಡೆಯಲಾರೆ ಈ ಹೃದಯದ ಕಾಟ
ಬೀರುವೆಯಾ ಒಮ್ಮೆ ಕುಡಿನೋಟ..

ಎಲ್ಲಿರುವೇ ನಲ್ಕೇ..
ನನ್ನ ಕಾಮನ ಬಿಲ್ಲೇ
ತಲೆ ಬಾಗುವೆ ಇಲ್ಲೇ
ನೀ ಬಂದು ನಿಲ್ಲೇ
ಹಂಬಲಿಸಿದೇ ಮನ ಕಾಣದೆ ನಿನ್ನ
ಪ್ರೀತಿಗೆ...