...

5 views

ಕೃಷ್ಣ ಕುಟೀರ
ಮಧುರ ಮೋಹನ ರಾಗ
ಮನದಾಳವ ಸೋಕಿರಲೀಗ
ಮುರಳಿ ನಾಮವ ಭಜಿಸಲು
ಪಿಳ್ಳಂಗೋವಿಯ ನಾದ ಬೇಕೇ?
ಭಕ್ತ ವತ್ಸಲರ ಸಲಹೋ ದೊರೆ
ನಿನ್ನ ನಾಮವೊಂದೇ ನಮಗಾಸರೆ
ನೀಲ ಮೇಘ ಶ್ಯಾಮನೇ
ನಿನ್ನ ದಾಸನಾಗಲು ಆಲಯ ಬೇಕೇ?
ಮುಕುಂದ ನವನೀತ ಚೋರ
ಪೊರೆವೆ ನೀ ಭಾವುಕರ
ನಿನ್ನೊಡಲ ಸೇರಲು ಈ ಕುಚೇಲ
ಮುಕ್ತಿ ಮಾರ್ಗದ ಜ್ಞಾನ ಬೇಕೇ?










© Shreeprabha