...

3 views

ಅನುಭವದ ಮಹಲಿನಲ್ಲಿ ಒಂದು ಸುತ್ತು..


ತಾಯಿ ಜೊತೆಗೆ ಒಂದು ಪುಟಾಣಿ ಬಂತು ಶಾಪಿಗೆ... ಕಂಡಿದ್ದೆಲ್ಲ ಬೇಕು ಅಂತ ಹಠ..ಆ ಮಗುವಿಗೆ. ತಾಯಿ ಗದರುತ್ತಾ ಇದ್ಲು.ಪಪ್ಪ ಅಷ್ಟೊಂದು ತಂದು ಇಟ್ಟಿದಾರೆ ಮನೆಯಲ್ಲಿ. ಫ್ರಿಜ್ ತುಂಬಿ ಹೋಗಿದೆ,ಅಷ್ಟೊಂದು ವೆರೈಟಿ ಚಾಕಲೇಟ್ ಇವೆ.ಇನ್ನೂ ಬೇಕು ಅಂತ ಹಠ ಮಾಡ್ತಿ.ಇನ್ನೊಂದು ಸಲ,ನಿನ್ನ ಎಲ್ಲೂ ಕರೆದುಕೊಂಡು ಬರಲ್ಲ ನೋಡು ಅಂತ ಹೆದರಿಸಿದಳು.ಅಳುವ ಮುಖ ಮಾಡಿ ಸುಮ್ಮನೆ ಆಯಿತು ಮಗು...ಹಾಗೇ ಒಂದಿಬ್ಬರು ಗಾರೇ ಕೆಲಸ ಮಾಡುವ ಮಕ್ಕಳು ಏನೋ ಚಾಕಲೇಟ್ ತೆಗೆದುಕೊಳ್ಳಲು ಬಂದು ನಿಂತಿದ್ವು..ಅವರನ್ನು ನೋಡಿದ ಆ ತಾಯಿ,ಹೆಸರೇನು.. ಯಾವ ಊರು ಎಲ್ಲಾ ವಿಚಾರಿಸ ಹತ್ತಿದಳು..ನಂತರ ಒಂದಿಷ್ಟು, ಚಾಕಲೇಟ್, ಬಿಸ್ಕತ್, ಕೇಕ್, ಐಸ್ ಕ್ರೀಂ ತೆಗೆದು, ಆ ಮಕ್ಕಳಿಗೆ ನೀಡಿದಳು.ಖುಷಿಯಿಂದ ನಗ್ತಾ ತಗೋಂಡ್ವು ಆ ಪುಟಾಣಿಗಳು.ಆಗ ತಾಯಿಯನ್ನು ಗುರಾಯಿಸ್ತಾ ಆ ಮಗು ಕೋಪದಿಂದ ಕೇಳ್ತು.ಮಮ್ಮಿ, ಇದು ಮೋಸ.ನಾನು ಕೇಳಿದ್ರೆ,ಕೊಡಿಸಿಲ್ಲ..ಅವರಿಗೆ ಎಷ್ಟೆಲ್ಲ ಕೊಡಿಸಿದ್ಯಲ್ವಾ ಅಂತ ..ಆಗ ತಾಯಿ ಹೇಳಿದ್ಲು,ಅವಳನ್ನು ಮುದ್ದು ಮಾಡ್ತಾ..ಚಿನ್ನಿ,ನಿಂಗಾದ್ರೆ,ನಾನು,ಪಪ್ಪ ಎಷ್ಟು ತಂದು ಕೊಡ್ತೀವಿ.ಪಾಪ,ಆ ಮಕ್ಕಳಿಗೆ ಯಾರು ಕೊಡಲ್ಲ,ಅಪ್ಪ, ಅಮ್ಮ ಕೂಲಿ ಕೆಲಸ ಮಾಡ್ತಾರೆ.ತುಂಬಾ ದುಡ್ಡು ಇರಲ್ಲ ಅವರ ಬಳಿ.ಪಾಪ ಅಲ್ವಾ.ಎಂದಾಗ ಆ ಪುಟ್ಟ ಮಗೂಗೆ ಏನನ್ನಿಸ್ತೋ.ಹ್ಮ ಮಮ್ಮಿ.ತಗೋಲಿ,ನಂದು .ನನಗೆ ಮನೇಲಿ ತುಂಬಾ ಇದೆ ಅಂತ ಹೇಳಿ,ಅವಳು ತಗೊಂಡಿದ್ದನ್ನೂ ಆ ಮಕ್ಕಳಿಗೇ ನೀಡಿದಾಗ..ನೋಡ್ತಾ ನಿಂತಿದ್ದ ನನ್ನ ಕಣ್ಣು ತುಂಬಿ ಬಂದಿತ್ತು.. ಆ ಮಾತೃಹೃದಯ ತಾಯಿಯನ್ನು ನೋಡಿ ತುಂಬಾ ಖುಷಿ ಎನಿಸಿತು..ನಿಜಕ್ಕೂ ಇವತ್ತಿನ ಮಕ್ಕಳಿಗೆ ಇಂಥದೊಂದು ಚಂದದ ನೀತಿ ಪಾಠ ಪೋಷಕರಿಂದ ಸಿಗಲೇಬೇಕು ಅನಿಸಿತು..ಅವಶ್ಯಕತೆಯೂ ಇದೆ ನಿಜಕ್ಕೂ. ಜನನಿ ತಾನೇ ಮೊದಲ ಗುರು..ಎಷ್ಟೊಂದು ಅದ್ಭುತವಾದ ಸತ್ಯ ಅಲ್ವಾ?😊
❤️ಪೂರ್ವವಾಹಿನಿ❤️