...

8 views

ಆತ್ಮ ಪರಮಾತ್ಮ
ದೇಹದ ಒಳಗಿದೆ ಆತ್ಮ
ಆತ್ಮದ ಹೊದಿಕೆಯೇ ದೇಹ

ಶುದ್ಧ ಆತ್ಮಕ್ಕೆ ಕೊಳಕು ಶರೀರ
ಆತ್ಮದ ಗತಿಗೆ ದೇಹವೇ ಆಧಾರ

ದೇಹ ದಣಿದರೂ ಆತ್ಮ ದಣಿಯದು
ಆತ್ಮ ದಣಿದರೆ ದೇಹ ಉಳಿಯದು

ದೇಹಕ್ಕೆ ಬೇಕು ಸಂರಕ್ಷಣೆ
ಆತ್ಮಕ್ಕೆ ಬೇಕು ಸಮರ್ಪಣೆ

ಮನಸ್ಸಿನ ಶುದ್ಧತೆ ಆತ್ಮದ ಪಾವಿತ್ರತೆ
ದೇಹದ ಪರಿಶುದ್ಧತೆ ಮನಸಿನ ಸ್ವಚ್ಛತೆ

ಅಂತರಾತ್ಮ ಒಳ್ಳೆಯದೇ, ಆದರೂ
ದೇಹದ ಕ್ರಿಯಾಯೋಜನೆ ಬೇರೆಯೇ

ಪರಮಾತ್ಮನ ಸೃಷ್ಟಿಯೇ ಆತ್ಮ
ದೇಹ ಆತ್ಮಗಳ ಸಂಬಂಧವೇ ಪರಮಾತ್ಮ

ಭಗವಂತನ ಸೃಷ್ಟಿ ಎಂತಹ ಅದ್ಬುತ
ಸೃಷ್ಟಿಕರ್ತನಿಗೆ ಕೈಮುಗಿವೆ ತಲೆಬಾಗುತ

#kannadaquotes #manuthoughts #god #life #ಆತ್ಮಪರಮಾತ್ಮ
© ✍🏻ಮನು (Manu )