...

24 views

ಓ ಪ್ರಾಣ ಸಖನೇ... ❤️
ಓ ಪ್ರಾಣ ಸಖನೇ ..❤️

ನೀನೇ ನನ್ನ ಪ್ರತಿಕಾವ್ಯದಿ ಮೌನದಿ ಅರಳಿದ
ಚೆಂದದ ಹೂ... ನಗುವು..
ಮುಗ್ದ ಭಾವದಿ ಮೆಲುದನಿಯಲಿ ಕಂಗೊಳಿಪ
ಮುದ್ದಿನ ...ಚೆಲುವು..
ಕಂಡೆ ನಾನಂದು ನಗು ಮೊಗದ ಆ ಚಂದಿರ,
ಕಾತುರದಿ ಕಾದಿಪ ಯಾರಿವನೆಂದು..?
ಪ್ರೀತಿಯ ಸವಿನುಡಿಗಳನಡುತ್ತಾ,ಅಚ್ಚಳಿಯದೆ ಉಳಿದಿದೆ,ಹಚ್ಚೆ ಮೂಡಿಸಿದ ಆ ಸುಂದರ
ನೆನಪುಗಳ ಸಿಹಿ ಸ್ವಪ್ನಗಳು ನನ್ನೆದೆಯಲ್ಲಿ ..!!

ಓ ಪ್ರಾಣ ಸಖನೇ
ಮೊದಲ ಮಾತಿನಲ್ಲೇ ನಾ ಮನಸೋತು ಹೋದೆ
ಎಷ್ಟು ಸುಂದರ ನಿನ್ನ ಈ ತಿಳಿ ಮನಸೆಂದು.
ನೀನಾಡುವ ಭವ್ಯ ನುಡಿಯ ಕೇಳುವ ತವಕ,
ಎಲ್ಲಿ ಅಡಗಿದ್ದೆ ಇಷ್ಟು ದಿನವೆಂಬ ಕೌತುಕ,
ಹೊಳೆವ ನಿನ್ನ ನಯನದಲ್ಲಿ ನೀತಿ ಬೋಧಕ ..!!

ಓ ಪ್ರಾಣ ಸಖನೇ..
ಹೃದಯದಲ್ಲಿ ಮನೆ ಮಾಡಿತು ಮೃದು ಮಾತು
ನಿನ್ನ ಸ್ನೇಹದಲಿ ಚಿಮ್ಮಿತು ಸವಿಜೇನ ಕೈತುತ್ತು
ಶಾಂತಿ, ಸಹನೆಯ ಒಲವ ಸಾಗರ
ಪ್ರೀತಿ ಮಮತೆಯ ಅನುರಾಗದ ಆಗರ
ಕರುಣೆ ತುಂಬಿದೆದೆಯಲಿ ನಿತ್ಯ ಝೇoಕಾರ..!!

ಓ ಪ್ರಾಣ ಸಖನೇ...
ಕಣ್ಣೆದುರಲಿ ನೀ ಅರಿವಿಲ್ಲದೆ ಬಂದೆಯಾ..?
ನನ್ನೆದೆಯ ಸ್ನೇಹದಿ ಕದವನು ನೀ ತೆರೆದೆಯಾ.?
ನಿನ್ನ ಅಗಾದ ಸ್ನೇಹದಿ ನಾ ಪುನೀತಳಾದೆ
ನಿನ್ನ ಪ್ರೇಮಮಯಿ ವಾತ್ಸಲ್ಯಕೆ ನಾ ಧನ್ಯಳಾದೆ
ನಿನ್ನ ಔದಾರ್ಯಕ್ಕೆ ನಾನೆಂದೂ ಶರಣಾದೆ..!!

ಓ ಪ್ರಾಣ ಸಖನೇ..
ಇದು ಜನ್ಮದ ಅನುಬಂಧವೋ,
ಸ್ನೇಹದ ಸಂಬಂಧವೋ
ಬಂಧಿಯಾಗಿ ಬಂಧಿಸಿರುವೆ ಪ್ರೀತಿಯ ಅನುಬಂಧನದಲ್ಲಿ..!!
❤️ಸುಮನ್ ಹೆಚ್ ಸಿ ❤️