...

14 views

ವಿಧಿಬರಹ
#Fate
ಹಣೆಬರಹವನ್ನು ಗೀಚಿದ್ದು ಬ್ರಹ್ಮ
ಇದು ಅಳಿಸಲಾಗದಂತಹ ಬರಹ ...

ಯಾವ ಮನುಜನೂ ಅರಿಯದ ಮರ್ಮ
ಅದು ನಮ್ಮ ಹಿಂದಿನ ಜನ್ಮದ ಕರ್ಮ...

ವಿಧಿಯಾಟವನ್ನು ಬಲ್ಲವರು ಯಾರು?
ಮುಂದಿನದು ಏನೆಂದು ತಿಳಿದವರಾರು?

ಕರ್ಮಾನುಸಾರ ಫಲವಿಹುದು ತಿಳಿಯೋ
ಬಂದದ್ದು ಬರಲೆಂದು ಸ್ವಾಗತಿಸಿ ನಡೆಯೋ...

ಭಗವಂತನೆಂಬ ಸೂತ್ರಧಾರನ ಕೈಯಲ್ಲಿ
ಅವನ ಆಟದ ಕೈಗೊಂಬೆ ನಾವಿಲ್ಲಿ...

ವಿಧಿಬರಹ ಬರೆದಿಹುದು ತಿಳಿಯದ ಭವಿಷ್ಯ
ಅದಕಾಗಿ ಹೋರಾಡು ನೀ ಪೂರ್ತಿ ಆಯುಷ್ಯ...

ಕಾಣದ ಶಕ್ತಿಯು ಕಾಯುತಿದೆ ಎಲ್ಲರನು
ಚಿಂತೆ ಇನ್ನೇಕೆ ಭಗವಂತ ಜೊತೆಗಿಹನು...

#kannadapoems #manuthoughts #life #ವಿಧಿಬರಹ
© ✍🏻ಮನು (Manu )