ರೈಲು ಪ್ರಯಾಣ
ಮುಗಿಲ ಬಂಡಿಯ ತೆರದಿ
ಉಗಿಯ ಬಂಡಿಯ ಪಯಣ
ಗಗನ ಕುಸುಮವು ನಿಜದಿ
ಮನವ ಕಾಡುತಲಿತ್ತು॥
ಮನದ ಆಸೆಯ ಹಕ್ಕಿ
ಗರಿಗೆದರಿ ನಿಂತಿತ್ತು
ಪಯಣ ಹೊರಡುವ
ಸವಿಯ ಸೊಲ್ಲು ಕೇಳಿ॥
ಮನಕಾದ ಆನಂದ
ಹೇಳಿ ತಣಿಯದು
ಹೊರಟ ಸಂಭ್ರಮ
ನೋಡಿ ತಿಳಿಯಬೇಕು॥
ರೈಲು ಬಂಡಿಯು ನನಗೆ
ಚಲಿಸುವ ಮನೆಯ
ಮುದವನು ಕೊಟ್ಟಿತು
ಓಡಾಡಿ ಸಂಭ್ರಮಿಸಿದೆ॥
ಚಲನೆ ಗತಿಯದು ವೇಗ ಪಡೆದು
ಗಿಡಗಳೆಲ್ಲವ ಹಿಂದೆಯೋಡಿಸಿ
ತನ್ನ ಗುರಿಯ ತಲುಪಲೆಂದು
ಓಡುವ ಓಟಗಾರನ ತೆರದಲಿ॥
ಉಗಿಯ ಬಂಡಿಯ ಪಯಣ
ಗಗನ ಕುಸುಮವು ನಿಜದಿ
ಮನವ ಕಾಡುತಲಿತ್ತು॥
ಮನದ ಆಸೆಯ ಹಕ್ಕಿ
ಗರಿಗೆದರಿ ನಿಂತಿತ್ತು
ಪಯಣ ಹೊರಡುವ
ಸವಿಯ ಸೊಲ್ಲು ಕೇಳಿ॥
ಮನಕಾದ ಆನಂದ
ಹೇಳಿ ತಣಿಯದು
ಹೊರಟ ಸಂಭ್ರಮ
ನೋಡಿ ತಿಳಿಯಬೇಕು॥
ರೈಲು ಬಂಡಿಯು ನನಗೆ
ಚಲಿಸುವ ಮನೆಯ
ಮುದವನು ಕೊಟ್ಟಿತು
ಓಡಾಡಿ ಸಂಭ್ರಮಿಸಿದೆ॥
ಚಲನೆ ಗತಿಯದು ವೇಗ ಪಡೆದು
ಗಿಡಗಳೆಲ್ಲವ ಹಿಂದೆಯೋಡಿಸಿ
ತನ್ನ ಗುರಿಯ ತಲುಪಲೆಂದು
ಓಡುವ ಓಟಗಾರನ ತೆರದಲಿ॥