...

9 views

ನನ್ನೊಲವ ಕನಸ ಕಂದ

ನನ್ನೊಲವ ಕನಸ ಕಂದನೆ
ನಿನಗಾಗಿ ನಿನ್ನಮ್ಮ ಕಾದಿಹಳು
ಬರುವೆಯಾ ಆದಷ್ಟು ಬೇಗನೆ
ತುಂಟ ತನವ ತೊರಲೆಂದು

ಒಂಭತ್ತು ತಿಂಗಳು ನಿನಗಾಗೆ ನಿನ್ನಮ್ಮ
ಉದರದೊಳಿತ್ತು ಕಾಪಾಡುತಿಹಳಮ್ಮ
ಕನಸ ನನಸಾಗಿಸುವೆಯೇನಮ್ಮ
ನಿನ್ನಮ್ಮನ ಪ್ರೀತಿಯ ಕಂದಮ್ಮ

ಕೊನೆಗೂ ಬಂದೆನಮ್ಮ
ನಿನ್ನ ಕೈ ಬೆರಳ ಹಿಡಿಯಲಮ್ಮ
ನಿನ್ನ ಮುದ್ದು ಮುಖದ ಅಂದವ ಹೆಚ್ಚಿಸಲಮ್ಮ
ನಿನ್ನ ಕೆನ್ನೆಗೆ ಮುತ್ತಕೊಡಲಮ್ಮ

*ರಾಧ ಹಾಸನ*
© All Rights Reserved