...

5 views

ತಾಯಿ ಋಣ.

ಕವನ, ಕವಿತೆಗಳಲ್ಲಿ.
ವರ್ಣಿಸಲು ಸಾಧ್ಯವೇ?
ತಾಯಿ ನಿನ್ನ ವಾತ್ಸಲ್ಯವ.

ಹೇಗೆ ಬರೆಯಲಿ ನಾನು?
ಪದ ಪುಂಜ ಬರಿದಾಯ್ತು!!
ಬಣ್ಣಿಸಲು ಸಾಧ್ಯವೆ, ನಿನ್ನ ತ್ಯಾಗವ!.

ದೇವ, ಧಾನವರಾದಿ,
ತೀರಿಸಲು ಆಗಿಲ್ಲ!!
ಹುಲುಮಾನವನಾನು
ಹೇಗೆ ತೀರಿಸಲಮ್ಮ,
ನಿನ್ನ ಋಣ ಭಾರವ!🙏
© ಮಂಜುನಾಥ್.ಕೆ.ಆರ್