...

19 views

ಮಂಜು ಮುಸುಕಿದ ಮನ
ಭಾವ ಬಂಧಗಳ ಮೋಹ ಪಾಶದ
ಸೆಳೆತಕೆ ಮನಸೊಡ್ಡಿ
ಮಂಜು ಮುಸುಕಿದ ಮಾನವಾಗಿದೆ
ಈ ನೊಂದ ಹೃದಯ
ಕನಸುಗಳ ಮುಸುಕಿನ ಗುದ್ದಾಟದಲಿ
ಮಬ್ಬಾದ ಮಂಜಿನ ಕತ್ತಲಿನ
ಮುಸುಕನು ಸರಿಸಲು ಪಂಜು (ದೀಪ) ಹಿಡಿದು
ಮನಕೆ ಬೆಳಕನೊಡ್ಡಿ
ಕೈ ಹಿಡಿಯಲು
ಬರುವ ಆ ದೊರೆ ಯಾರು....
ಕಾದಿರುವೆ ಅವನಿಗಾಗಿ.....

ಮನಸೇಕೋ ಇತಿ ಮಿತಿಯಿಲ್ಲದೆ
ಹುಡುಕಾಡಿದೆ ಅವನ.
ಅಂದು ಬಿದ್ದದ್ದೇ ತಪ್ಪಾಯಿತೇನೋ
ಅವನ ಮೋಹ ಪಾಶಕ್ಕೆ
ಇಂದು ತಬ್ಬಿಬ್ಬಾಗಿ ನೋಡುವ
ಸಂದರ್ಭವಾಗಿದೆ...
@ದೇವಿಸುಮಲತಾ✍️
© All Rights Reserved