...

18 views

ನಗುವ ಮರೆತಿದ್ದೆ.. ❤️
ನಗುವ ಮರೆತ ನನಗೆ ತುಟಿ ಬಿಚ್ಚಿ
ನಗುವ ಕಲಿಸಿದ ಓ ಸ್ನೇಹವೆ.
ಎದೆ ತುಂಬ ಕಾರ್ಮೋಡ
ಮಬ್ಬು ಕವಿದಿತು..!
ಕತ್ತಲೆಯ ಸರಿಸಿ ಹೂವಾಗಿಸಿದೆ,
ನಿನ್ನ ನೆನಪಾಗಿ ಜೀವದುಸಿರಂತೆ
ನನ್ನ ಕಾಡುತಿತ್ತು..!

ನೀನಿಂದು ಬಂದಿರೆ
ಬಾಳಲಿ,ಹೊಸ ಕನಸ ಹೊತ್ತು
ನಾ ಸೇರಿದೆ ನಿನ್ನತೋಳಿನಲಿ..!
ಕಣ್ಣೀರು ಕಡಲಾಗಿತು ಈ ಹೃದಯ,
ಪ್ರೀತಿಯ ಕಂಪನೆರೆದು
ಸೇರಿತು ನಿನ್ನೊಡಲ..!

ಬದುಕ ಭಾಗ್ಯವ ಕಂಡೆ
ನೀನಾಡುವ ಸಿಹಿ ಮಾತಿಂದ
ನಗುವ ನಗಿಸಿದ ಪ್ರೀತಿಯ
ಪ್ರೇಮಿಯೂ ನೀನೇ..!

ಅನುರಾಗದಲೆಯಲಿ ತೇಲಿಸಿ
ಮನದಾಸೆಯ ಕೆರಳಿಸಿದ
ಪ್ರೀತಿಯ ನಾವಿಕನೂ ನೀನೇ,
ಮನವಿಂದು ಬಯಸುತಿದೆ
ಜೊತೆಯಿರು ಎಂದೆಂದೂ..!!

❤️ಸುಮನ್ ಹೆಚ್ ಸಿ ❤️
#ಸುಮನ್ #writcopoem