...

5 views

ರವಿಬೆಳಗೆರೆ ಜೀಗೆ ದೀಪನಮನ
"ದೀಪನಮನ"
ಭಾವಪೂರ್ಣ ಶೃದ್ಧಾಂಜಲಿ
ಭೃಂಗಿಮಠ ಅವರ ರಚನೆಬೆಳೆಗೆರೆ ಜೀ ಗೆ ಕಾವ್ಯ ನಮನ*
(ಕವಿ:ಭೃಂಗಿಮಠ)

ತಳದಿಂದ ಬಾನೆತ್ತರದ
ಪತ್ರಿಕಾಲೋಕದಿ ಬೆಳೆದೆ
ಅಕ್ಷರ ಪೋಣಿಸಿದ ಸುದ್ದಿಯ ಸಾರ ನೀಡಿದೆ

ವಿಭಿನ್ನತೆಯ
ವಿಚಾರದಿ
ಹೊಸತು ಸೃಷ್ಠಿಸಿದೆ
ಖಾಸ್ ಬಾತ್ ಹೇಳಿ ಸರ್ವರಿಗೂ ಖಾಸ್ ಆದೆ

ಮೂಲಾಜೀ ಇಲ್ಲದೇ
ಬದುಕ ಪಯಣಗೈದೆ
ಸಮಾಜ ಘಾತುಕ ಶಕ್ತಿಯ
ಸದೆಬಡೆಯಲೆತ್ನಿಸಿದೆ

ಓ ಮನಸ್ಸಿನ‌ ಮೂಲಕ ಸರ್ವಮನಗೆದ್ದೆ
ಅನಾಥ ಸಾವಿರಾರು ಮಕ್ಕಳಿಗೆ
ಶಿಕ್ಷಣ ಕೊಡಿಸಿದೆ
ಪಾಪಿಗಳ ಲೋಕದ ಜಾತಕ ಬರೆದೆ
ಭೀಮಾತೀರದ ರಕ್ತದೋಕುಳಿಯ ಚರಿತ್ರೆ ಬರೆದೆ

ನಟನಾಗಿ ಅಭಿನಯಕ್ಕೂ ಸಹಿ ಎನಿಸಿದೆ
ಪತ್ರಕರ್ತರ ಎದೆಗಾರಿಕೆಗೆ ಸಾಕ್ಷಿಯಾದೆ
ಕೆಲಸ ಮಡ್ತೀನಿ ದುಡಿತೀನಂತ ಹೊರಟು
ದುಡ್ಡೂ ಹೆಸರು ಮಾಡಿದೆ

ಬಾಟಮ್ ಐಟಮ್ ನಲ್ಲಿ ಮಾತನಾಡಿದೆ
ಹಾಯ್ ಬೆಂಗಳೂರು ಖ್ಯಾತಿಪಡಿದೆ
ಪುಂಡ ಪುಡಾರಿ ಬದ್ಮಾಸರಿಗೆ ಜಾಲಾಡಿದೆ
ಲಕ್ಷಾನುಗಟ್ಟಲೇ ಅಸಂಖ್ಯಾತ ಅಭಿಮಾನಿಗಳ ಪಡೆದೆ

ಕನ್ನಡ ಲೇಖನದಲ್ಲಿ ಇಂಗ್ಲೀಷ ಶಬ್ದಗಳ ಬಳಕೆಯ ಸೂತ್ರ ಹಿಡಿದೆ
ಸುದ್ಧಿ ಬರಹಕೆ ಸಾಹಿತ್ಯಿಕ ರೂಪ ನೀಡಿದೆ
ಪ್ರತಿವಾರದ ಅಚ್ಚರಿ ನಮಗೆ ನೀಡಿದೆ

ಜಮ್ಮು ಕಾಶ್ಮೀರ ಲಡಾಯಿಯ ನೇರ ಸುದ್ದಿಗೈದೆ
ಧೀರನಾಗಿ ಸದಾ ಅಚ್ಚಳೆಯದೇ ಉಳಿದೆ
ಕನ್ನಡಿಗರ ಹೃದಯ ಸಾಮ್ರಾಟನಾದೆ
ಅಮ್ಮನ ಕರುಣೆಯ
ಕಂದನಾಗಿ ಬೆಳೆದೆ

ಸಿಗರೇಟು ಮದ್ಯಪಾನ ಸೇವಿಸಿದರೂ
ಚಟಗಾರನಾಗದೆ ಸಮಾಜವನ್ನು ತಿದ್ದಿದೆ
ಬುದ್ದಿ ಬಂಡರಿಗೂ ಕಿವಿ ಹಿಂಡಿ ಬುದ್ದಿ ಹೇಳುವ ಹಟವಾದಿಯಾದೆ

ಪತ್ರಿಕೆ ಪೇಜುಗಳನ್ನೇ ರಣರಂಗವಾಗಿಸಿದೆ
ರಾಜಕೀಚಕರ ನಿದ್ರೆ ಕೆಡಸಿದೆ
ದುಸ್ಟರಿಗೆ ಸಿಂಹ ಸ್ವಪ್ನವಾದೆ
ಕಪ್ಪು ಮಸಿಯಲ್ಲೇ ಕಪ್ಪುಜನರ ಬೆತ್ತಲಾಗಿಸಿದೆ

ಬೆಳೆಗೆರೆ ಕಾಯಕ ಸಿದ್ದಾಂತದಿ
ನಡೆದೆ
ಬೀಚೀ ಸಾಹಿತ್ಯಕ್ಕೂ ಮೀರಿಸಿದೆ
ಶುದ್ಧವಾದ ಬಿಳಿಗೇರೆಯಾದೆ

ಹೇಳದೇ ಕೇಳದೆ ನೀ ಹೋದೆ
ನಿನ್ನ ಪತ್ರಿಕೆ ನಿಲ್ಲದಿರಲಿ ಎಂದಾಗ
ಮತ್ತೆ ಚೇತರಿಸಿ ಮುನ್ನಡೆಸುವ ಭರವಸೆ ನೀ ನೀಡಿ ಅಷ್ಟರಲ್ಲೆ ನೀ ಅಮರವಾದೆ

ನಿನ್ನಯ ಬರಹ ಶಕ್ತಿ ಯುಕ್ತಿಗೆ
ಸಮಾನರಾರಿಲ್ಲ ಭಾವ ಮೂಡಿದೆ
ಮತ್ತೆ ಹುಟ್ಟಿ ಬಾ
ಘಟ್ಟಿಗ ರವಿ ಕವಿಮನ ಪ್ರಾರ್ಥಿಸಿದ
© Mallikarjun Bhrungimath