...

10 views

ಭರವಸೆಯ ಬದುಕು


ಏನನೂ ಹೇಳದೆ ನೀ ಹೋದೆ,
ಹೃದಯ ಭಾರದಿ ನಾ ನೊಂದೆ,

ಪ್ರೀತಿಯ ಮಾತಿಗೆ ನಾ ಕಾದು,
ತಾಳದ ವಿರಹದಿ ಮನ ಬೆಂದು,

ಪ್ರೇಮದ ನುಡಿಯ ಹಂಬಲಿಸಿ,
ಪ್ರೀತಿಯ ಪದಗಳ ನಾ ಬಯಸಿ,

ಕ್ಷಣದಲೇ ಸೋತಿದೆ ಹೃದಯವಿದು,
ಪ್ರೇಯಸಿ ಬರುವಿಕೆಯನು ಕಾದು,

ಭರವಸೆಯೊಂದಿಗೆ ನಾ ಬಾಳುವೆ,
ನನ್ನೀ ಗೆಳತಿಯ ಪಡೆದೇ ಪಡೆಯುವೆ...

✍️