...

4 views

ಸಖೀ ನೀ ನನಗೆ ಅನಿವಾರ್ಯ, ನಾ ನಿನಗಲ್ಲದಿದ್ದರು.
ದಿಲ್ ಕಿ ಬಾತ್

ಹೇ ಧರ್ತಿ ನೀ ನನಗೆ ಅನಿವಾರ್ಯ, ಅನಿವಾರ್ಯವಲ್ಲ ನಾ ನಿನಗೆ, ಹುಟ್ಟಿ ಬಂದು ಹಲವು ವಸಂತಗಳ ಮೇಲೆ ಸಿಂಧೂರ ಇಟ್ಟೆ ನಿನ್ನ ವಿಶಾಲವಾದ ಹಣೆಗೆ, ಹಸಿರು ಮೈದಳೆದು ನಿಂತ ನೀನು ಕಣ್ಣಿಗೆ ಕಾಣಲೆಯಿಲ್ಲ ಕೊನೆಗೆ, ಹವಳ ಮುತ್ತುಗಳಂತೆ ಅಲಂಕಾರ ತಲೆ ತೆನೆ ತೆನೆಗೆ.

ಮೊದಲೇ ನೀನು ಮಾಯೆ ಮೋಹದ ಜಾಲದಲ್ಲಿ ಬಿದ್ದ ನಾನು ಬಯಸಿದ್ದು ನಿನ್ನಿಂದ ಬೇರೇನೆ, ನನ್ನ ದಾಹಕ್ಕೆ ಕೊನೆಯಿಲ್ಲದಾದಾಗ,ವಿನಾಶದ ಹಣೆಪಟ್ಟಿ ಕಟ್ಟಿಕೊಂಡೇ ನನ್ನನಗೆ.

ಮತ್ತೆ ಮತ್ತೆ ನಿನಗೆ ಅಲಂಕಾರ, ನನ್ನಂತ ಸ್ವಾರ್ಥಿ ಜೀವಿಗಳ ಆಗಮನ ನಿರ್ಗಮನ, ಲೆಕ್ಕವಿಲ್ಲದೆ ಹುದುಗಿ ಹೋಗಿವೆ ನಿನ್ನ ಗರ್ಭಾಶಯದಲ್ಲಿ, ಆಸೆಬುರುಕುತನದ ನನ್ನಂತ ಹುಳುಗಳು, ನಾವೆನಿದ್ದರು ನುಸಿ ಹತ್ತಿದ ಕಾಳುಗಳು.

ಒಮ್ಮೊಮ್ಮೆ ಈ ಬಂಧನಗಳು ಹಾಗೆ, ನಿನ್ನಂತೆ ಮೌನವಾಗಿ ಸಾಗುತ್ತವೆ,ನನ್ನಂತ ಸ್ವಾರ್ಥಿ ಪ್ರೇಮಿಗಳಿಗೆ ಕಾಲವೇ ಉತ್ತರ ನೀಡುತ್ತದೆ, ಅವಸಾನದ ಅಂತ್ಯವೆಂಬ ಶಾಸನ ಬರೆದು.

ಧರತಿ ನೀನು ಹೆಣ್ಣು ನಿನ್ನಂತೆ ಪ್ರತಿರೂಪಗೊಂಡ ನನ್ನವಳು ಹೆಣ್ಣು,ನನ್ನದಲ್ಲವೆಂದರು ನೋಡದೆ ಇರಲಾರವು ಈ ಸ್ವಾರ್ಥಭರಿತ ಕಣ್ಣು, ಮೈ ತುಂಬಾ ಆಗಿವೆ ಚಿಂತೆಗಳೆಂಬ ಹುಣ್ಣು.

ಮತ್ತೆ ಮತ್ತೆ ರಕ್ತಾಭಿಜಾಸುರರಂತೆ ಹುಟ್ಟಿ ಬರುತ್ತೇವೆ ಶಾಂತ ಸ್ವರೂಪದ ನಿನ್ನ ಒಡಲು ಕೊರೆಯುತ್ತೇವೆ, ನೋವುಂಡರು ನಗುತ್ತಲೇ ಬಿಳ್ಕೊಡುವೆ ನಮ್ಮನ್ನು, ಕರೆಯುವುದಾದರು ಏಕೆ ಕಳಿಸುವುದಾದರು ಯಾಕೆ..?
ನಮ್ಮ ಅನಿವಾರ್ಯ ನಿನಗಿಲ್ಲದಮೇಲೆ.

ಎಲ್ಲವೂ ನೀರಮೇಲಣ ಗುರುಳೆಯ ಹಾಗೆ, ಪೂರ್ಣ ಆಯಸ್ಸು ಕಾಣದೆ ಗಾಳಿಗಿಟ್ಟ ದೀಪದಂತೆ, ದೀಪವುರಿದಾಗ ಹುಣ್ಣಿಮೆ ಆರಿದಾಗ ಅಮವಾಸ್ಯೆ, ಮನುಷ್ಯ ಬಂಧನಗಳಂತೆ.

ಧರಿತಿ ನಿನಗ್ಯಾವತ್ತೂ ನಾನು ಅನಿವಾರ್ಯವಲ್ಲ, ನನಗೆ ನೀ ಅನಿವಾರ್ಯ, ಮತ್ತೆ ಮತ್ತೆ ನಿನ್ನನ್ನೇ ಅವಲಂಬಿಸಿದ್ದೇನೆ, ನೇಗಿಲು ಹಿಡಿಯುವ ನೆಪದಲ್ಲಿ ನಿನ್ನ ಹತ್ತಿರವಾಗಲು ಸಂಬಂಧಗಳು ಸ್ಥಿರವಾಗಿರಲೆಂದು, ಅಸ್ಥಿರವಾದ ಈ ಜೀವನದ ಗೊಡವೆಗೆ ಹೋಗದೆ, ಕಣ್ಣು ಬಿಟ್ಟು ನೋಡಿದಾಗ ಅರಿವಾಗಿದೆ ನಿನ್ನ ಉದರದಲ್ಲೊಂದು ಗೋರಿಯೊಳಗೆ ನಾನಿರುವುದೆಂದು, ಎಲ್ಲವೂ ದ್ವಂದ್ವ ಅರ್ಥವಾಗದ ನನ್ನ ಬದುಕು.

✍🏻ಪಾರೂಪ್ರಿಯನಂದು
ನಂದುಪೂಜಾರಿ.ಸಿದ್ದಾಪುರ
© All Rights Reserved

Related Stories