...

9 views

ಸೋತ ಜೀವಕೆ.. ಸಾಂತ್ವಾನವೇ ಟಾಣಿಕ್...
ಇಬ್ಬರು ಹುಡುಗರು ಬಂದ್ರು..ನೋಡಿದ್ರೆ ಎಜುಕೇಟೆಡ್ ತರ ಇದಾರೆ.ಎರಡು ಟೀ ಕೊಡಿ ಅಕ್ಕ ಅಂದ್ರು.ಅದರಲ್ಲಿ ಒಬ್ಬ ಎರಡುತೊಟ್ಟು ವಿಷ ಹಾಕಿ ಕೊಟ್ಟು ಬಿಡಿ ಅಕ್ಕ ಅಂದ.ಯಾಕೆ ಹಾಗೆ ಹೇಳ್ತಾ ಇದೀರಾ..ಹಸಿದೋರಿಗೆ ಒಂದು ತುತ್ತು ಹಾಕೋ ಕೈ ನಮ್ದು..ನೀವು ನೋಡಿದ್ರೆ ವಿಷ ಹಾಕಿ ಕೋಡಿ ಅಂತೀರಲ್ವಾ ಅಂತ ಚೂರು ಗದರಿಸಿದೆ..ಅಯ್ಯೋ ಅಕ್ಕ ಸಾಕಾಗಿದೆ ಬದುಕು.. ಸತ್ತೇ ಹೋಗೋಣ ಅನಿಸ್ತಿದೆ ಅಲವತ್ತುಕೊಂಡ
ಆ ಹುಡುಗ...ಬದುಕಲ್ಲಿ ಟ್ರಾಜಿಡಿ,ಒತ್ತಡ, ಟೆನ್ಷನ್ ಇದ್ರೇನೆ ,ಬದುಕನ್ನು ಎದುರಿಸೋ ಛಲ ಹುಟ್ಟೋದು.ಹಾಗೇ ಸಂತೃಪ್ತಿ ಬದುಕು ಸಿಗೋದು...ಜೀವನದಲ್ಲಿ ಎಲ್ಲಾ ಸುಖೈಶ್ವರ್ಯಗಳೂ ಪರಿಶ್ರಮ ಇಲ್ದೇ ಸಿಕ್ಕಿತು ಅಂದ್ರೆ ಲೈಫ್ ಬೋರ್ ಹೊಡಿಯುತ್ತೆ ಎಂದೆ ನಾನು..ಎಂತದೇ ಇರಲಿ,ಸ್ವಲ್ಪ ತಾಳ್ಮೆ ತಗೋಂಡು ಯೋಚನೆ ಮಾಡಿ ..ಪರಿಹಾರ ಇದ್ದೇ ಇರುತ್ತದೆ ಪ್ರತೀ ಕಷ್ಟ,ನೋವಿಗೂ...ಸಾಯೋಕೆ ನಿಮಿಷ ಸಾಕು ನಿಜ..ಹುಟ್ಟೋಕೆ ತುಂಬಾ ಸಮಯ ಬೇಕು.. ತಾಯಿ ತಿನ್ನೋ ನೋವಿನ ಮುಂದೆ ಜೀವನದಲ್ಲಿ ಬರೋ ಕಷ್ಟ, ನೋವು ಏನೇನೂ ಅಲ್ಲ.. ಧೈರ್ಯದಿಂದ ಎದುರಿಸಿ ಎಂದೆ...ಏನನ್ನಿಸ್ತೋ ಗೊತ್ತಿಲ್ಲ.. ಥ್ಯಾಂಕ್ಯೂ ಅಕ್ಕ ಅಂದ್ರು..
ಸಾಯುವಷ್ಟು ಮನಸ್ಸು ಸೋತಿದೆ ಅಂದ್ರೆ ಆ ಜೀವ ತುಂಬಾ ನೊಂದಿರಲೇಬೇಕು..ಕಷ್ಟ ನಷ್ಟ, ನೋವು ಮನುಷ್ಯನಿಗೆ ಸಹಜ..ಯಾರಾದರೂ ಚೂರು ಧೈರ್ಯ, ಸಾಂತ್ವನ ಹೇಳಿದರೆ ..ಆ ಜೀವ ಸಮಾಧಾನಗೊಂಡು ತಾಳ್ಮೆಯಿಂದ ಯೋಚಿಸೋಕೆ ಸಜ್ಜಾಗುತ್ತದೆ..ಜೀವನದಲ್ಲಿ ಮುನ್ನುಗ್ಗಿ ಬಾಳುತ್ತದೆ...ನೊಂದ ಜೀವಕ್ಕೆ, ತೋಡಿಕೊಳ್ಳುವ ಮನಸಿರಬೇಕು..ಹಾಗೇ ಕೇಳಿಸಿಕೊಂಡ ಜೀವಕ್ಕೆ ಸಾಂತ್ವನದ ಮಾತಿನಿಂದ ಧೈರ್ಯ ತುಂಬುವ ಮನಸ್ಸು, ಸಮಯ ಇರಬೇಕಷ್ಟೇ....ಹಣ,ಆಸ್ತಿ,ಸಂಪತ್ತು, ಪ್ರೆಸ್ಟೀಜ್,ಜಾತಿ,ಮತ,ಧರ್ಮ, ಪಂಗಡ ಜೀವ ಉಳಿಸದಿಲ್ಲಿ..ಬೇಕಾಗಿರೋದು,ಕೇವಲ ಸಾಂತ್ವನಿಸುವ ಒಂದೆರಡು ಮಾತು.....